ಬೆಂಗಳೂರು: ತಮ್ಮ ಕೌಶಲ್ಯ ಮತ್ತು ಶಕ್ತಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ, ಬೆಂಗಳೂರಿನ ಪರ್ವತಾರೋಹಿ ನವೀನ್ ಮಲ್ಲೇಶ್ ಸೇರಿದಂತೆ ಐವರು ಭಾರತೀಯ ಪರ್ವತಾರೋಹಿಗಳ ತಂಡ ಮೌಂಟ್ ಕಾಂಗ್ ಯಾಟ್ಸೆ II(6250 ಮೀ) ಮತ್ತು ಲಡಾಖ್‌ನ ಮೌಂಟ್ ಡಿಜೊ ಜೊಂಗೊ(6240 ಮೀ) ಶಿಖರಗಳನ್ನು 70 ಗಂಟೆಗಳಲ್ಲಿ ಏರಿದ್ದಾರೆ.
ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ಐದು ದಿನಗಳ ಕಾಲ ಪರ್ವತಾರೋಹಿಗಳನ್ನು ಬೇಸ್ ಕ್ಯಾಂಪ್‌ನಲ್ಲಿ ನೆಲೆಸುವಂತೆ ಮಾಡಿತು. ಆದರೆ ಅವರು ಉತ್ಸಾಹ ಕಳೆದುಕೊಳ್ಳದೆ ಜುಲೈ 17 ರಂದು ಶಿಖರಗಳನ್ನು ಏರುವ ತಮ್ಮ ದಂಡಯಾತ್ರೆ ಆರಂಭಿಸಿದರು. ಜುಲೈ 22 ರಂದು ಎರಡು ಶಿಖರಗಳ ಆರೋಹಣವನ್ನು ಕೇವಲ 70 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದಾರೆ.
ಬೆಂಗಳೂರು ಮೂಲದ ಟ್ರೆಕ್ಕಿಂಗ್ ಉದ್ಯಮಿ ನವೀನ್ ಮಲ್ಲೇಶ್ ಅವರಲ್ಲದೆ, ಅವರ ತಂಡದಲ್ಲಿ ಪುಣೆ, ಹೈದರಾಬಾದ್, ಮುಂಬೈ ಮತ್ತು ಹರಿಯಾಣದ ಪರ್ವತಾರೋಹಿಗಳು ಇದ್ದರು.
"ನಾವು ಮೊದಲು 6250 ಮೀಟರ್ ಎತ್ತರದ ಮೌಂಟ್ ಕಾಂಗ್ ಯಾಟ್ಸೆ ಶಿಖರ ಏರಲು ಆರಂಭಿಸಿದೆವು. ಒಂದು ದಿನದ ವಿರಾಮದ ನಂತರ, ನಾವು ಎರಡನೆ ಏರಲು ನಿರ್ಧರಿಸಿದೆವು. ನಾವು ದಾಖಲೆ ಸೃಷ್ಟಿಸಲು ಪ್ರಯತ್ನಿಸುತ್ತಿಲ್ಲ. ಆದರೆ ನಮ್ಮ ಮಿತಿ ಮತ್ತು ಕೌಶಲ್ಯಗಳನ್ನು ಪರೀಕ್ಷಿಸಿದೆವು ಎಂದು ನವೀನ್ ಮಲ್ಲೇಶ್ ಅವರು ಹೇಳಿದ್ದಾರೆ.
ಪ್ರತಿ ಶಿಖರ ಏರುವುದನ್ನು ಪೂರ್ಣಗೊಳಿಸಲು ಸುಮಾರು 20 ಗಂಟೆಗಳು ಹಿಡಿಯಿತು ಎಂದು ನವೀನ್ ಮಲ್ಲೇಶ್ ಅವರು ತಿಳಿಸಿದ್ದಾರೆ.