ಕಾಸರಗೋಡು: ಜುಲೈ 13 ರಂದು ಏರ್ ಇಂಡಿಯಾ ಎಕ್ಸ್‍ಪ್ರೆಸ್ ನಂ.ಐಎಕ್ಸ್ 814 ರಲ್ಲಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಕಾಸರಗೋಡಿನ ಪ್ರಯಾಣಿಕರು ಹಾಗೂ ಪಯ್ಯನೂರು ನಿವಾಸಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದ್ದು, 21 ದಿನಗಳ ಕಾಲ ಸ್ವಯಂ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಸುಮಾರು 80 ಮಂದಿಯನ್ನು ಸಂಪರ್ಕಿಸಲಾಗಿದೆ ಎಂಬುದು ಅಧಿಕಾರಿಗಳಿಂದ ಬಂದಿರುವ ಮಾಹಿತಿ.
ಪಯ್ಯನ್ನೂರು ಮೂಲದವರೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಹೆಚ್ಚಿನ ಅಪಾಯದ ವರ್ಗದಲ್ಲಿರುವ ಐದು ಜನರು ರೋಗಿಯ ಹತ್ತಿರ ಪ್ರಯಾಣಿಸಿದ್ದರು. 13ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ದಕ್ಷಿಣ ಕನ್ನಡದಲ್ಲೂ 90 ಮಂದಿಯ ಮೇಲೆ ನಿಗಾ ಇರಿಸಲಾಗಿದೆ ಎಂದು ಸೂಚನೆಗಳಿವೆ.
ದೃಢಪಟ್ಟಿರುವ ರೋಗಿಯು ಪಯ್ಯನ್ನೂರಿನವನಾಗಿದ್ದರೂ, ಕಾಸರಗೋಡಿನ ಸ್ಥಳೀಯರೊಂದಿಗೆ ಅನೇಕ ಸಂಪರ್ಕಗಳನ್ನು ಹೊಂದಿದ್ದಾನೆ. ಜ್ವರ, ತೀವ್ರ ತಲೆನೋವು, ದೇಹದಲ್ಲಿ ಗುಳ್ಳೆಗಳು, ಸೈನಸ್‍ಗಳ ಉರಿಯೂತ, ಸ್ನಾಯು ನೋವು ಮತ್ತು ಬೆನ್ನುನೋವಿನಂತಹ ಲಕ್ಷಣಗಳು ಕಂಡುಬಂದರೆ, ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಬೇಕು ಮತ್ತು ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿಗೆ”: ಜಿಲ್ಲಾ ನಿಯಂತ್ರಣ ಸೆಲ್: 04672217777 ಸಂಪರ್ಕಿಸಲು ಸೂಚಿಸಲಾಗಿದೆ.
ಪಯ್ಯನ್ನೂರಿನಲ್ಲಿ ಮಂಗನ ಕಾಯಿಲೆ; ಕಾಸರಗೋಡು ಜಿಲ್ಲೆಯಲ್ಲಿ 80 ಮಂದಿ ಸಂಪರ್ಕ ಪಟ್ಟಿಯಲ್ಲಿ
0
ಜುಲೈ 24, 2022