ಬದಿಯಡ್ಕ: ಸುಂದರ ಬಾರಡ್ಕ ಅವರ "ನೆಲದನಿ" ಲೇಖನಗಳ ಸಂಕಲನ ಬಿಡುಗಡೆ ಸಮಾರಂಭ ಜುಲೈ 9 ರಂದು 2.30ಕ್ಕೆ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಜರಗಲಿದೆ.
ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸುವರು. ನವದೆಹಲಿ ಜೆ.ಎನ್.ಯು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಅವರು ಕೃತಿ ಬಿಡುಗಡೆ ಮಾಡುವರು. ರಾಜಶ್ರೀ ಟಿ.ರೈ ಪೆರ್ಲ ಅವರು ಕೃತಿ ಪರಿಚಯ ಮಾಡುವರು. ಕೇರಳ ತುಳು ಅಕಾಡಮಿ ಅಧ್ಯಕ್ಷ ಉಮೇಶ್ ಎಂ ಸಾಲಿಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ.ಕೆ.ಅಹಮ್ಮದ್ ಹುಸೈನ್, ಆಯಿಷಾ ಪೆರ್ಲ, ಉದಯ ಸಾರಂಗ್ , ಲೇಖಕ ಸುಂದರ ಬಾರಡ್ಕ ಮೊದಲಾದವರು ಉಪಸ್ಥಿತರಿರುವರು.