ನವದೆಹಲಿ: ಇದೇ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಕುತೂಹಲದ ಸಂಗತಿ ಎಂದರೆ ರಾಷ್ಟ್ರಪತಿ ಸ್ಥಾನಕ್ಕೆ ಒಟ್ಟೂ 98 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆಗೆ ಉಳಿದದ್ದು ಮಾತ್ರ ಇಬ್ಬರೇ ಇಬ್ಬರು!
ಇದೇಕೆ ಎಂದರೆ, 96 ಮಂದಿಯ ಅರ್ಜಿಯು ತಿರಸ್ಕಾರಗೊಂಡಿವೆ.
ಈ ಹಿನ್ನೆಲೆಯಲ್ಲಿ ಕೊನೆಗೆ ಉಳಿದದ್ದು ಇಬ್ಬರೇ ಇಬ್ಬರು. ಅವರೆಂದರೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಯುಪಿಎ ಅಭ್ಯರ್ಥಿ ಯಶವಂತ್ ಸಿನ್ಹಾ .
ಚುನಾವಣೆಯ ಸಭಾಧ್ಯಕ್ಷರು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಜೂನ್ 29 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿತ್ತು. ಜುಲೈ 2ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಒಟ್ಟು 98 ಮಂದಿ 115 ಸೆಟ್‌ಗಳ ನಾಮಪತ್ರಗಳನ್ನು ಭರ್ತಿ ಮಾಡಿದ್ದಾರೆ. ಈ ಪೈಕಿ 26 ಮಂದಿ ನಾಮಪತ್ರ ಭರ್ತಿ ಮಾಡಿದ ಸಂದರ್ಭದಲ್ಲಿಯೇ ತಾಂತ್ರಿಕ ಕಾರಣಗಳಿಂದ ರದ್ದಾಯಿತು ಎಂದು ಹೇಳಲಾಗಿದೆ.
ದೆಹಲಿ ಸೇರಿದಂತೆ 17 ರಾಜ್ಯಗಳಿಂದ ನಾಮಪತ್ರಗಳನ್ನು ಭರ್ತಿ ಮಾಡಲಾಗಿದೆ. ಈ ಪೈಕಿ ದೆಹಲಿಯಿಂದ ಗರಿಷ್ಠ 19 ಮಂದಿ ನಾಮಪತ್ರ ಸಲ್ಲಿಸಿದ್ದು, ಉತ್ತರ ಪ್ರದೇಶದ 16 ಮಂದಿ ನಾಮಪತ್ರ ಸಲ್ಲಿಸಿವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಿಂದ 11 ಮಂದಿ ಹಾಗೂ ತಮಿಳುನಾಡಿನಿಂದ 10 ಮಂದಿ ಅರ್ಜಿ ಸಲ್ಲಿಸಿದ್ದಾರೆ. ದ್ರೌಪದಿ ಮುರ್ಮು ಸೇರಿದಂತೆ 10 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.