ಡೆಹ್ರಾಡೂನ್: ಕಳೆದೊಂದು ವಾರದಿಂದ ದೇಶಾದ್ಯಂತ ಹಲವು ಭಾಗಗಳಲ್ಲಿ ವ್ಯಾಪಕ ಪ್ರವಾಹ ಪರಿಸ್ಥಿತಿ ಉಂಟಾಗುವಷ್ಟು ಮಳೆಯಾಗುತ್ತಿದ್ದು ಮಳೆ ಸಂಬಂಧಿ ಹಲವು ಅವಘಡಗಳು, ಪ್ರಾಣಹಾನಿ ಸಂಭವಿಸಿದೆ.
ಇಂದು ಉತ್ತರಾಖಂಡದ ರಾಮನಗರ ಎಂಬಲ್ಲಿ ದ್ಹೆಲ ನದಿಯ ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗಿದ್ದು 9 ಮಂದಿ ಮೃತಪಟ್ಟಿದ್ದಾರೆ. ಐವರು ಸಿಲುಕಿಹಾಕಿಕೊಂಡಿದ್ದು ಓರ್ವ ಬಾಲಕಿ ಮಾತ್ರ ಬದುಕುಳಿದಿದ್ದಾಳೆ. ತೀವ್ರ ಮಳೆಯಿಂದ ಇಂದು ಬೆಳಗಿನ ಜಾವ ಈ ದುರ್ಘಟನೆ ನಡೆದಿದೆ ಎಂದು ಕುಮೌನ್ ವಲಯದ ಡಿಐಜಿ ಆನಂದ್ ಭರನ್ ತಿಳಿಸಿದ್ದಾರೆ.
ಮೂವರು ಯುವಕರು ನೀರುಪಾಲು: ಉತ್ತರ ದೆಹಲಿಯ ಯಮುನಾ ನದಿ ನೀರಿನಲ್ಲಿ ಮೂವರು ಯುವಕರು ನೀರುಪಾಲಾಗಿದ್ದಾರೆ. ಅವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮತ್ತೊಬ್ಬ ಯುವಕನಿಗಾಗಿ ಹುಡುಕಾಟ ನಡೆಯುತ್ತಿದೆ. ಮಳೆಯ ಮಧ್ಯೆ ಮೋಜಿಗಾಗಿ ನೀರಿನಲ್ಲಿ ಸ್ನಾನ ಮಾಡಲೆಂದು ನಿನ್ನೆ ಯುವಕರು ನದಿಗೆ ತೆರಳಿದ್ದರು. ಎಷ್ಟು ಹೊತ್ತಾದರೂ ಮನೆಗೆ ವಾಪಸ್ಸಾಗದಿದ್ದಾಗ ಆತಂಕಗೊಂಡು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.
ಕೊನೆಗೆ ನೀರಿನಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಸಿಕ್ಕಿದೆ.