HEALTH TIPS

ಮತ್ತೆ ಸೋಂಕಿಗೆ ಪ್ರಚೋದನೆ: BA.2.75 ಇತರೆ ಓಮಿಕ್ರಾನ್ ಉಪ ತಳಿಗಳ ನಿಗಾವಣೆ ಅಗತ್ಯ: ಡಾ.ಎನ್. ಕೆ. ಅರೋರಾ

             ನವದೆಹಲಿ: ಕಳೆದ ಆರು ತಿಂಗಳಲ್ಲಿ ದೇಶದಲ್ಲಿ ಆತಂಕಕಾರಿ ಹೊಸ ಕೋವಿಡ್ ರೂಪಾಂತರಿ ವರದಿಯಾಗಿಲ್ಲ. ಆದಾಗ್ಯೂ, ಕೆಲವು ಓಮಿಕ್ರಾನ್ ಉಪ ತಳಿಗಳು ಮತ್ತೆ ಸೋಂಕನ್ನು ಪ್ರಚೋದಿಸುವುದರಿಂದ ಅವುಗಳ ಪ್ರಸರಣ ಕುರಿತ ನಿಕಟ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮುಖ್ಯಸ್ಥ ಡಾ.ಎನ್. ಕೆ ಅರೋರಾ ಹೇಳಿದ್ದಾರೆ.

               ದೇಶದಾದ್ಯಂತ, ಓಮಿಕ್ರಾನ್‍ನ ಃಂ.2 ಮತ್ತು ಃಂ.2.38 ಸೇರಿದಂತೆ  ಅದರ ಉಪ ತಳಿಗಳು ಪ್ರಬಲವಾದ ತಳಿಗಳಾಗಿವೆ. ಇತ್ತೀಚೆಗೆ, ಃಂ.4 ಮತ್ತು ಃಂ.5 ಕೆಲವು ಶೇಕಡಾ 10 ಮಾದರಿಗಳಲ್ಲಿ ಕಂಡುಬಂದಿವೆ. ಬಿಎ.2.75 ಕೂಡ ಪತ್ತೆಯಾಗಿದೆ. ಅವುಗಳಲ್ಲಿ ಹಲವು ಮರುಸೋಂಕನ್ನು ಪ್ರಚೋದಿಸಬಹುದು, ಆದರೆ ಅವು ತೀವ್ರವಾದ ಕಾಯಿಲೆಗೆ ಸಂಬಂಧಿಸಿಲ್ಲ. ಒಟ್ಟಾರೆಯಾಗಿ, ಉಪ-ತಳಿಗಳು ವಿಕಸನಗೊಳ್ಳುತ್ತಿವೆ ಮತ್ತು ಅವುಗಳ ಪ್ರಸರಣವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕಾಗಿದೆ" ಎಂದು ಡಾ ಅರೋರಾ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

                    ಡಾ. ಅರೋರಾ ಪ್ರಕಾರ ಪ್ರಸ್ತುತದಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಮೂರನೇ ಅಲೆಯ ಭಾಗವಾಗಿದೆ. ನಾಲ್ಕನೇ ಅಲೆ ಅಲ್ಲ. ಇದಕ್ಕೆ ಇನ್ನೊಂದು ಅಯಾಮವಿದೆ.  ಹೆಚ್ಚಿನ ಜನಸಾಂದ್ರತೆ ಹೊಂದಿರುವ ಮಹಾನಗರಗಳು ಮತ್ತು ದೊಡ್ಡ ನಗರಗಳಿಗೆ ಪ್ರಕರಣಗಳು ಹೆಚ್ಚಾಗಿ ಸೀಮಿತವಾಗಿವೆ.

                  ಇತ್ತೀಚೆಗೆ, ಸಣ್ಣ ಪಟ್ಟಣಗಳಲ್ಲಿಯೂ ಏರಿಕೆಯಾಗಿದೆ. ​​ಜನಸಂಖ್ಯಾ ಸಾಂದ್ರತೆ, ಹೆಚ್ಚಿದ ಪ್ರಯಾಣ ಮತ್ತು ಸಭೆ, ಸಮಾರಂಭಗಳು, ಜೊತೆಗೆ ಕೋವಿಡ್  ಶಿμÁ್ಟಚಾರ ಪಾಲಿಸದಿರುವುದು ಮತ್ತಿತರ ಕಾರಣಗಳಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಮುಖ ವಿಷಯವೆಂದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರೋಗಿಗಳು ಲಸಿಕೆ ತೆಗೆದುಕೊಂಡಿದ್ದಾರೆ. ಮತ್ತು ಸಾಮಾನ್ಯ-ಶೀತ ಅಥವಾ ಸೌಮ್ಯವಾದ ಇನ್ಫ್ಲುಯೆನ್ಸ ತರಹದ ಕಾಯಿಲೆಗಳನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು.

                ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಭಾರತ ಮತ್ತು ಇತರ ದೇಶಗಳಲ್ಲಿ ಪತ್ತೆಯಾದ ಓಮಿಕ್ರಾನ್ ರೂಪಾಂತವಾದ  ಃಂ.2.75 ಉಪ ತಳಿ  ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಗಮನಿಸುತ್ತಿದೆ ಎಂದು ಅವರು ಹೇಳಿದ್ದಾರೆ. 

                    ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್  ಟ್ವಿಟ್ಟರ್‍ನಲ್ಲಿ ಪೆÇೀಸ್ಟ್ ಮಾಡಿದ ವೀಡಿಯೊದಲ್ಲಿ ಃಂ.2.75 ಎಂದು ಕರೆಯಲ್ಪಡುವ ಉಪ- ತಳಿ ಹೊರಹೊಮ್ಮಿದೆ. ಇದು ಭಾರತದಲ್ಲಿ ಮೊದಲು ವರದಿಯಾಗುತ್ತಿದ್ದು, ತದನಂತರ ಸುಮಾರು 10 ಇತರ ದೇಶಗಳಲ್ಲಿ ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries