ತಿರುವನಂತಪುರ: ಸೋಲಾರ್ ಪ್ರಕರಣದ ಆರೋಪಿ ಪಿಸಿ ಜಾರ್ಜ್ ವಿರುದ್ಧ ನೀಡಿರುವ ಕಿರುಕುಳದ ದೂರಿನಲ್ಲಿ ದೂರುದಾರೆಯ ಬಳಿ ಸಾಕ್ಷ್ಯವಿದೆ ಎಂದು ವಾದಿಸಲಾಗಿದೆ. ಪಿಸಿ ಜಾರ್ಜ್ ಶತ್ರುವಾಗಿರಲಿಲ್ಲ. ಈಗ ಬಂಧನವಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದೂ ದೂರುದಾರರು ತಿಳಿಸಿದ್ದಾರೆ.
ಕಳೆದ ಎಂಟು ವರ್ಷಗಳಲ್ಲಿ, ಪಿಸಿ ಜಾರ್ಜ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದೆ. ಸ್ವಪ್ನಾ ಸುರೇಶ್ ಗೆ ಸಹಾಯ ಮಾಡಬೇಕು ಎಂಬ ಭಾವನೆಯಿಂದ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು ಎಂದು ಸೋಲಾರ್ ಕೇಸ್ ಆರೋಪಿತೆ ಹೇಳಿದ್ದಾರೆ. ಪಿ.ಸಿ.ಜಾರ್ಜ್ ಜತೆಗಿನ ಸಂಭಾಷಣೆಯ ದೂರವಾಣಿ ದಾಖಲೆಗಳು ನನ್ನ ಬಳಿ ಇದ್ದು, ಸಾಕ್ಷ್ಯಗಳನ್ನು ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಪುರಾವೆ ಇದೆಯೇ ಎಂದು ನನ್ನನ್ನು ಪದೇ ಪದೇ ಕೇಳಲಾಗುತ್ತಿದೆ. ಈ ರೀತಿಯ ಪುರಾವೆಗಳಿದ್ದರೆ ಅವರನ್ನು ಏಕೆ ಕೇಳಬಾರದು? ಪಿ.ಸಿ.ಜಾರ್ಜ್ ಮಾಡಿರುವ ಕೆಲಸ ಅವರಿಗೆ ಚೆನ್ನಾಗಿ ಗೊತ್ತಿದೆ. ಅತಿಥಿಗೃಹಕ್ಕೆ ಆಹ್ವಾನಿಸಿದ್ದರು. ಅದಕ್ಕೆಲ್ಲ ನಾನು ಸೊಪ್ಪು ಹಾಕಿಲ್ಲ. ನಾನು ಸಂತಳÀಲ್ಲ. ನಾನ್ಲುಪರಾಧಿ ಹೌದು. ಆದರೆ ದೇಶದ್ರೋಹಿ ಚಟುವಟಿಕೆಗಳಿಗೆ ಒಮ್ಮೆಯೂ ಆಸಕ್ತಳಾದವಳಲ್ಲ. ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನಂತೆ ಆರ್ಥಿಕ ಅಪರಾಧದ ಆರೋಪಿಗಳಿಗೆ ಬೇರೆ ಪ್ರಕರಣಗಳಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಸೋಲಾರ್ ಕೇಸ್ ಆರೋಪಿತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.