ಬದಿಯಡ್ಕ: ಬಳ್ಳಪದವಿನಲ್ಲಿರುವ ವೀಣಾವಾದಿನಿ ಸಂಗೀತ ಶಾಲೆಯ ನಾದೋಪಾಸನಾ ಕಾರ್ಯಕ್ರಮದಲ್ಲಿ ಈ ಬಾರಿ (ಶನಿವಾರ) ಯುವ ಕಲಾವಿದರಾದ ಕುಮಾರಿ ಶರಣ್ಯಾ ಮಾಳಿಗೆಮನೆ ಮತ್ತು ಆಗಮ ಪೆರ್ಲ ಅವರ ಹಾಡುಗಾರಿಕೆಯನ್ನು ಆಯೋಜಿಸಲಾಗಿತ್ತು.
ಅತಿಥಿಯಾಗಿ ಆಗಮಿಸಿದ ಸುಳ್ಯದ ಕೆ. ವಿ. ಜಿ. ಎಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ. ಶ್ರೀಧರ ಕೆ. ಅವರು ಯುವ ಕಲಾವಿದರಿಗೆ ಇಂತಹ ವೇದಿಕೆಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ತುಂಬ ಉಪಯುಕ್ತ. ಮುಂದೆ ಈ ಕ್ಷೇತ್ರದಲ್ಲಿ ಮೇಲೇರಲು ಬಹಳ ಒಳ್ಳೆಯ ಅವಕಾಶ ಎಂದರು.
ಯುವ ಉದ್ಯಮಿ ಸಂತೋಷ್ ಕುಮಾರ್ ಮತ್ತು ಕವಿ ಸಾಹಿತಿ ಡಾ. ವಸಂತಕುಮಾರ ಪೆರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶರಣ್ಯಾ ಕೆ. ಮತ್ತು ಆಗಮ ಪೆರ್ಲ ಅವರಿಗೆ ವಯಲಿನ್ ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು ಮತ್ತು ಮೃದಂಗದಲ್ಲಿ ಗುರುಗಳಾದ ವಿದ್ವಾನ್ ಯೋಗೀಶ ಶರ್ಮಾ ಸಹಕರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಕಲಾವಿದರನ್ನು ಗೌರವಿಸಲಾಯಿತು. ಪೋಷಕರು ಮತ್ತು ಸಂಗೀತಾಸಕ್ತ ಸಭಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯುವ ಕಲಾವಿದರನ್ನು ಪೆÇ್ರೀತ್ಸಾಹಿಸಿದರು.