HEALTH TIPS

'ಭಯೋತ್ಪಾದಕರಿಗೆ ಆಶ್ರಯ ನೀಡುವ ಕೇರಳ ಕರ್ನಾಟಕದಲ್ಲಿ ಹಿಂಸಾಚಾರವನ್ನು ಹರಡಲು ಪ್ರೇರೇಪಿಸುತ್ತಿದೆ': ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಣರಾಯಿ ಸರ್ಕಾರದ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್


                ನವದೆಹಲಿ: ಪಿಣರಾಯಿ ಸರ್ಕಾರ ಕೇರಳವನ್ನು ಭಯೋತ್ಪಾದನೆಯ ಸುರಕ್ಷಿತ ತಾಣವನ್ನಾಗಿ ಮಾಡಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
         ಯಾರು ಏನಂದುಕೊಂಡರೂ ಪ್ರವೀಣ್ ನೆಟ್ಟಾರು ಹಂತಕರ ರಕ್ಷಣೆ ಸಾಧ್ಯವಿಲ್ಲ ಎಂದರು. ಆರೋಪಿಗಳನ್ನು ಬಂಧಿಸಲು ಮತ್ತು ಕಠಿಣ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.
           ಬಿಜೆಪಿ ಕಾರ್ಯಕರ್ತರμÉ್ಟೀ ಅಲ್ಲ, ಸಾರ್ವಜನಿಕರೂ ಆಕ್ರೋಶಗೊಂಡಿದ್ದಾರೆ. ಸುಸಂಸ್ಕøತ ಸಮಾಜಕ್ಕೆ ಹೊಂದಿಕೆಯಾಗದ ಹಿಂಸೆಯನ್ನು ಭಯೋತ್ಪಾದಕರು ಬಿಚ್ಚಿಡುತ್ತಾರೆ. ಇದಕ್ಕೆ ಸಾರ್ವಜನಿಕರು ದಿಟ್ಟ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
            ಹಿಂಸಾಚಾರ ನಡೆಸಿ ಕೇರಳಕ್ಕೆ ಬರುವ ಭಯೋತ್ಪಾದಕರಿಗೆ ಸುರಕ್ಷಿತ ನೆಲೆ ಒದಗಿಸುವ ಪರಿಪಾಠ ಕೆಲ ಕಾಲಗಳಿಂದ ಜಾರಿಯಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಸುಮಾರು ಇಪ್ಪತ್ತೆರಡು ರಾಜಕೀಯ ಕೊಲೆಗಳು ನಡೆದಿರುವ ರಾಜ್ಯ ಕೇರಳ. ಪ್ರವೀಣ್ ನೆಟ್ಟಾರು ಹಂತಕರು ಕೂಡ ಕೇರಳ ನೋಂದಣಿ ಬೈಕ್‍ಗಳಲ್ಲಿ ಬಂದಿದ್ದರು ಎಂಬುದಕ್ಕೆ ಸಾಕ್ಷಿಗಳಿವೆ. ಪಿಣರಾಯಿ ಸರ್ಕಾರವು ಭಯೋತ್ಪಾದಕರನ್ನು ರಕ್ಷಿಸುವ ಮೂಲಕ ಕರ್ನಾಟಕಕ್ಕೂ ಹಿಂಸಾಚಾರವನ್ನು ಹರಡಲು ಪ್ರಯತ್ನಿಸುತ್ತಿದೆ. ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
            ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಕ್ರಿಮಿನಲ್‍ಗಳು ಎಲ್ಲಿ ಅಡಗಿ ಕುಳಿತರೂ ಅವರನ್ನು ಹಿಡಿದು ನ್ಯಾಯಾಂಗದ ಮುಂದೆ ತರಲಾಗುವುದು. ಹಿಂಸಾಚಾರವನ್ನು ಆದರ್ಶೀಕರಿಸುವ ಪಾಪ್ಯುಲರ್ ಫ್ರಂಟ್ ಮತ್ತು ಎಸ್‍ಡಿಪಿಐ ಸಂಘಟನೆಗಳಿಗೆ ಕರ್ನಾಟಕ ಸರ್ಕಾರ ಸ್ಪಷ್ಟ ಉತ್ರ ನೀಡಲಿದೆ  ಎಂದು ಕೇಂದ್ರ ಸಚಿವರು ಹೇಳಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries