ಲೇಡಿ ಸುಕುಮಾರ ಕುರುಪ್ ಎಂದೇ ಜನಪ್ರಿಯರಾಗಿರುವ ಓಮನಾ ಈಡನ್ ಎಂಬ ವೈದ್ಯೆಯ ಕಥೆ ಆಧರಿಸಿ ಮಲೆಯಾಳಂ ನಲ್ಲಿ ಹೊಸ ಚಿತ್ರವನ್ನು ಶೀಘ್ರ ತೆರೆಕಾಣಲಿದೆ ಯುವ ನಟ ನವಜಿತ್ ನಾರಾಯಣನ್ ನಿರ್ದೇಶನದ ಈ ಚಿತ್ರಕ್ಕೆ ದೀಪಕ್ ವಿಜಯನ್ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಆರು ವರ್ಷಗಳ ಸಂಶೋಧನೆ ಮತ್ತು ತನಿಖೆಯ ನಂತರ ಚಿತ್ರದ ಸ್ಕ್ರಿಪ್ಟ್ ಸಿದ್ಧಪಡಿಸಲಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ತಮಿಳು ಮತ್ತು ಮಲಯಾಳಂನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಮುಖ್ಯ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತಮಿಳಿನ ಪ್ರಮುಖ ನಟಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿರುವ ಸಿನಿಮಾದ ಟೈಟಲ್ ಹಾಗೂ ನಟರ ಬಗ್ಗೆ ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ ಎಂದು ಚಿತ್ರತಂಡದವರು ಮಾಹಿತಿ ನೀಡಿದ್ದಾರೆ.
ಸ್ನೇಹಿತೆಯನ್ನು ಕೊಲೆ ಮಾಡಿ ಓಮನಾ ಪರಾರಿಯಾಗಿದ್ದು, ಕಾಲು ಶತಮಾನ ಕಳೆದರೂ ಪೋಲೀಸರಿಗೆ ಪತ್ತೆಹಚ್ಚಲಾಗಿಲ್ಲ. ಜುಲೈ 11, 1996 ರಂದು ಡಾ ಓಮನಾ ತನ್ನ ಸ್ನೇಹಿತ ಕಣ್ಣೂರು ಮೂಲದ ಮುರಳೀಧರನ್ ನನ್ನು ಕೊಂದು ಪರಾರಿಯಾದವಳು. . ಊಟಿಯ ಹೋಟೆಲ್‍ನಲ್ಲಿ ಓಮನಾ ಮುರಳೀಧರನ್ ನನ್ನು ಕತ್ತು ಕೊಯ್ದು ಸೂಟ್ ಕೇಸ್ ನಲ್ಲಿ ತುಂಬಿಸಿ ತೆರಳುತ್ತಿದಾಗ ಸಂಶಯಗೊಂಡು ಪೋಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಅವಳು 2001 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಬಳಿಕ ಪತ್ತೆಯಾಗಿಲ್ಲ.
ಆದರೆ ಚಿತ್ರದ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಟೀಕೆಗಳೂ ಹೆಚ್ಚಾಗುತ್ತಿವೆ. ಇದು ಸುಕುಮಾರ ಕುರುಪ್ ಅವರ ಬದುಕನ್ನು ಸಿನಿಮಾ ಮಾಡಿ ಕುರುಪ್ ಅವರನ್ನು ಹೀರೋ ಆಗಿ ಬಿಂಬಿಸಿದಂತೆ ಆಗುತ್ತದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಅಪರಾಧಿಗಳ ಜೀವನಗಾಥೆಯನ್ನು ಸಿನಿಮಾ ಮಾಡುವ ಮೂಲಕ ಇಂತಹ ಅಪರಾಧಗಳನ್ನು ಸಾಮಾನ್ಯಗೊಳಿಸಲಾಗುತ್ತಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ.