ನವದೆಹಲಿ: ಡಾಲರ್ ಎದುರು ಇತ್ತೀಚಿನ ರೂಪಾಯಿ ಕುಸಿತಕ್ಕೆ ರಷ್ಯಾ- ಉಕ್ರೇನ್ ನ ಯುದ್ಧ, ಕಚ್ಚಾ ತೈಲ ಏರಿಕೆ, ಜಾಗತಿಕ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವು ಜಾಗತಿಕ ಅಂಶಗಳು ಕಾರಣವಾಗಿದೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.
ಸದನದಲ್ಲಿ ಕೇಳಲಾದ ಪ್ರಶ್ನೆಗೆ ಸರ್ಕಾರ ಉತ್ತರಿಸಿದ್ದು, ರೂಪಾಯಿ ಕುಸಿತ ಕಾಣುತ್ತಿದ್ದರೂ ಜಗತ್ತಿಕ ಇತರ ಪ್ರಮುಖ ಕರೆನ್ಸಿಗಳ ಎದುರು ಬಲಿಷ್ಠಗೊಂಡಿದೆ ಎಂದೂ ತಿಳಿಸಿದೆ.
ಡಾಲರ್ ಎದುರು ರೂಪಾಯಿಗಿಂತಲೂ ಹೆಚ್ಚು ಬ್ರಿಟೀಷ್ ಪೌಂಡ್, ಜಪಾನೀಸ್ ಯೆನ್, ಯೂರೋಗಳು ಕುಸಿದಿದೆ ಹಾಗೂ ಭಾರತೀಯ ರೂಪಾಯಿ ಈ ಕರೆನ್ಸಿಗಳ ಎದುರು 2022 ರಲ್ಲಿ ಬಲಿಷ್ಠಗೊಂಡಿದೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.
ರೂಪಾಯಿ ಮೌಲ್ಯ ಕುಸಿತದಿಂದ ಆರ್ಥಿಕತೆ ಮೇಲೆ ಉಂಟಾಗುತ್ತಿರುವ ಪರಿಣಾಮ, ಆರ್ಥಿಕತೆಗೆ ಸಂಬಂಧಿಸಿದ ಹಲವು ಅಂಶಗಳಲ್ಲಿ ಒಂದು ಎಂದು ಸರ್ಕಾರ ಹೇಳಿದೆ. ರೂಪಾಯಿ ಮೌಲ್ಯ ಕುಸಿತದಿಂದ ರಫ್ತು ಪೈಪೋಟಿ ಹೆಚ್ಚಲಿದ್ದು, ಆರ್ಥಿಕತೆಗೆ ಉತ್ತಮವಾದರೆ ಆಮದು ತುಟ್ಟಿಯಾಗಿ ಆಮದು ವಸ್ತುಗಳ ಮೇಲೂ ಪರಿಣಾಮ ಉಂಟುಮಾಡಲಿದೆ ಎಂದಿದೆ ಸರ್ಕಾರ.