HEALTH TIPS

ಕರ್ನಾಟಕ ಎಟಿಎಸ್ ಕೇರಳದಲ್ಲಿ: ತಲಶ್ಶೇರಿಯಲ್ಲಿ ದಾಳಿ; ಭಯೋತ್ಪಾದನಾ ನಿಗ್ರಹ ದಳದಿಂದ ಉಗ್ರನ ಮೊಬೈಲ್ ಮತ್ತು ಲ್ಯಾಪ್‍ಟಾಪ್ ವಶ


               ಕಣ್ಣೂರು: ಭಯೋತ್ಪಾದಕ ನಂಟು ಹೊಂದಿರುವ ಶಂಕಿತ ಎಸ್.ಡಿ.ಪಿ.ಐ. ಕಾರ್ಯಕರ್ತನ ಮನೆಯಲ್ಲಿ ಕರ್ನಾಟಕ ಭಯೋತ್ಪಾದನಾ ನಿಗ್ರಹ ದಳ ಶೋಧ ನಡೆಸಿದೆ.
            ತಲಶ್ಶೇರಿ ಪ್ಯಾರಾಲ್ ನಿವಾಸಿ ಅಬಿದ್ ಎಂಬುವವರ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಆತನ ಮೊಬೈಲ್ ಪೋನ್ ಮತ್ತು ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ. ಕೀಜಾಂತಿಮುಕ್‍ನ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಅಬಿದ್ ಉಗ್ರರ ಪಡೆಗಳ ವಾಟ್ಸ್ಆ್ಯಪ್ ಗ್ರೂಪ್‍ಗಳಲ್ಲಿ ಸದಸ್ಯನಾಗಿದ್ದಾನೆ.
          ಅಬಿದ್ ಮನೆಗೆ ನಿನ್ನೆ ಬೆಳಿಗ್ಗೆ ಆಗಮಿಸಿದ ಶೋಧ ತಂಡ ವಶಪಡಿಸಿಕೊಂಡ ಡಿಜಿಟಲ್ ಸಾಕ್ಷ್ಯವನ್ನು ಪರಿಶೀಲಿಸಿ ಆತನನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿತು. ಧಾರ್ಮಿಕ ಭಯೋತ್ಪಾದನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಬಿದ್ ನಿರಂತರವಾಗಿ ಪ್ರಚಾರ ನಡೆಸುತ್ತಿದ್ದ ಎಂಬ ಮಾಹಿತಿ ಮೇರೆಗೆ ತನಿಖೆ ನಡೆಸಲಾಗಿತ್ತು.
         ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿಬೀಳಿಸಿರುವ ಸರಣಿ ಕೊಲೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಸಂದೇಶಗಳಿಂದ ಆತಂಕಕ್ಕೆ ಒಳಗಾಗಬೇಡಿ ಎಂದು ರಾಜ್ಯ ಎಡಿಜಿಪಿ ಅಲೋಕ್ ಕುಮಾರ್ ಜನರಿಗೆ ತಿಳಿಸಿದ್ದಾರೆ. ಜನರಿಗೆ, ಪೋಲೀಸರ ಮೇಲೆ ನಂಬಿಕೆ ಇರಿಸಬೇಕೆಂದೂ ನಿಷ್ಪಕ್ಷಪಾತ ತನಿಖೆಯ ಭರವಸೆ ನೀಡಿರುವರು.  ಎರಡೂ ಪ್ರಕರಣಗಳ ಆರೋಪಿಗಳಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
         ಜನರ ಜೀವ, ಆಸ್ತಿ ರಕ್ಷಣೆ ನಮ್ಮೆಲ್ಲರ ಹೊಣೆ. ಫಾಜಿಲ್ ಪ್ರಕರಣ ಶೀಘ್ರದಲ್ಲೇ ಸಾಬೀತಾಗಲಿದೆ. ಪೆÇಲೀಸ್ ಇಲಾಖೆಗೆ ಸವಾಲಿನ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಪೆÇಲೀಸರು ಸವಾಲನ್ನು ಸ್ವೀಕರಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಬದ್ಧರಾಗಿದ್ದಾರೆ ಎಂದು ತಿಳಿಸಿದರು.
           ಜುಲೈ 21 ರಂದು ಹತ್ಯೆಗೀಡಾದ ಮಸೂದ್ ಪ್ರಕರಣದಲ್ಲಿ ರಾಜ್ಯ ಪೆÇಲೀಸರು ಎಲ್ಲಾ ಎಂಟು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸಿದ್ದಾರೆ ಎಂದು ಮಂಗಳೂರಿನಲ್ಲಿ ಬೀಡುಬಿಟ್ಟು ತನಿಖೆ ಮತ್ತು ಕರಾವಳಿ ಜಿಲ್ಲೆಯ ಅಸ್ಥಿರ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದ ಎಡಿಜಿಪಿ ಕುಮಾರ್ ಹೇಳಿದ್ದಾರೆ. ಪ್ರವೀಣ್ ಕುಮಾರ್ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದೇವೆ. ಪ್ರಕರಣದ ಇತರ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಫಾಜಿಲ್ ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಪೆÇಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಪ್ರಸ್ತುತ ಭಯದ ವಾತಾವರಣವನ್ನು ಎದುರಿಸಲು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರದಲ್ಲಿ ವಿಶೇಷ ಕಮಾಂಡೋ ಸ್ಕ್ವಾಡ್‍ಗಳಿಗೆ ತರಬೇತಿ ನೀಡಬೇಕು ಎಂದು ಅವರು ಹೇಳಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries