ನವದೆಹಲಿ: ನಿರ್ದಿಷ್ಟ ಆಹಾರೋತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೆರಿಗೆ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಜಿಎಸ್‌ಟಿಯನ್ನು ಗೃಹಸ್ಥೀ ಸರ್ವನಾಶ್ ಟ್ಯಾಕ್ಸ್ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
'ಹಣದುಬ್ಬರದಿಂದ ಬಳಲುತ್ತಿರುವ ಜನರಿಗೆ 'ಗಬ್ಬರ್' ಪಾಕವಿಧಾನ ತೋರಿಸಲಾಗಿದೆ. ಕಡಿಮೆ ಮಾಡಿ, ಕಡಿಮೆ ತಿನ್ನಿ, ಸುಳ್ಳುಗಳ ಸರಮಾಲೆಯಿಂದ ಹಸಿವು ನೀಗಿಸಿಕೊಳ್ಳಿ ಎನ್ನಲಾಗುತ್ತಿದೆ. ಮಿತ್ರರ ಮಾತುಗಳಿಗೆ ಕಿವಿಗೊಟ್ಟಿರುವ ಪ್ರಧಾನಿ ಈಗ ಸಾರ್ವಜನಿಕರ ಮಾತನ್ನೂ ಆಲಿಸಿ ಈ ಜಿಎಸ್‌ಟಿಯನ್ನು ಹಿಂಪಡೆಯಬೇಕಾಗಿದೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕೆಲವು ಆಹಾರೋತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿರುವುದಕ್ಕೆ ಪ್ರತಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಈ ಕುರಿತು ಚರ್ಚೆಯಾಗಬೇಕು ಎಂದು ಪಟ್ಟು ಹಿಡಿದಿರುವ ಪ್ರತಿಪಕ್ಷಗಳು, ಕಲಾಪಕ್ಕೆ ಅಡ್ಡಿಪಡಿಸಿವೆ. ಪರಿಣಾಮವಾಗಿ ಸೋಮವಾರದಿಂದ ಈವರೆಗೆ ಸಂಸತ್‌ನ ಉಭಯ ಸದನಗಳಲ್ಲಿ ಸುಗಮ ಕಲಾಪ ನಡೆದಿಲ್ಲ.