ತಿರುವನಂತಪುರ: ಸಂಸ್ಕøತಿ ಖಾತೆ ಸಚಿವ ಸಾಜಿ ಚೆರಿಯನ್ ಅವರ ಮಾತು ಅನುಚಿತವಾಗಿದೆ ಎಂದು ಸಿಪಿಐ ಹೇಳಿದೆ. ಸಂವಿಧಾನದ ಬಗ್ಗೆ ಸಾಜಿ ಚೆರಿಯನ್ ಅವರ ಮಾತುಗಳು ಗಂಭೀರವಾದುದು. ಇದೇ ವಿಚಾರವಾಗಿ ಯಾರಾದರೂ ನ್ಯಾಯಾಲಯದ ಮೊರೆ ಹೋದರೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಸಿಪಿಐ ತಿಳಿಸಿದೆ.
ಸಿಪಿಎಂ ನಾಯಕರು ಸಾಜಿ ಚೆರಿಯನ್ ಅವರ ಭಾಷಣ ಮತ್ತು ಸಂವಿಧಾನ ವಿರೋಧಿ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಸಿಪಿಐ ಭಾಷಣದಲ್ಲಿನ ಟೀಕೆಗಳು ಕಾನೂನು ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ನಿರ್ಣಯಿಸಿ ಬಹಿರಂಗವಾಗಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿತು.
ಇದೇ ವೇಳೆ ಸಾಜಿ ಚೆರಿಯನ್ ಅವರ ಮಾತನ್ನು ಸಮರ್ಥಿಸಿಕೊಳ್ಳಲು ಎಂವಿ ಜಯರಾಜನ್ ಕೂಡ ಮುಂದಾದರು. ಸಚಿವರ ಭಾಷಣವನ್ನು ತಿರುಚಲಾಗಿದೆ ಎಂದು ಎಂವಿ ಜಯರಾಜನ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಭಾಷಣವನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಪತ್ತನಂತಿಟ್ಟದ ಮಲ್ಲಪಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಜಿ ಚೆರಿಯನ್ ಸಂವಿಧಾನ ವಿರೋಧಿ ಬಾಷಣ ಮಾಡಿದ್ದರು. ಭಾರತದ ಸಂವಿಧಾನವು ಜನರನ್ನು ಲೂಟಿ ಮಾಡಲು ಸಹಾಯ ಮಾಡುತ್ತದೆ ಎಂಬ ಗಂಭೀರ ಟೀಕೆಗಳನ್ನು ಸಚಿವರ ಭಾಷಣದ ವಿಷಯ ಒಳಗೊಂಡಿದೆ.
ಆದರೆ ಭಾಷಣ ವಿವಾದವಾದಾಗ ಸಾಜಿ ಚೆರಿಯನ್ ಪ್ರತಿಕ್ರಿಯಿಸಿದ್ದು, ತಾನು ಸಂವಿಧಾನವನ್ನು ಟೀಕಿಸಿಲ್ಲ ಬದಲಿಗೆ ಸಂವಿಧಾನದ ಸಾರವನ್ನು ನಾಶಪಡಿಸಲು ಉದ್ದೇಶಿಸಿದೆ ಎಂದು ಹೇಳಿದ್ದಾರೆ. ಇದಾದ ಕೂಡಲೇ ಸಿಪಿಎಂ ನಾಯಕತ್ವ ಸಚಿವರನ್ನು ಬೆಂಬಲಿಸಲು ಮುಂದಾಯಿತು.