ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್‍ಗೆ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 10ನೇ ತರಗತಿ ವಿದ್ಯಾರ್ಹತೆ ಹೊಂದಿರುವ 18 ರಿಂದ 75 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿಸಲ್ಲಿಸುವ ಪ್ರದೇಶದ ಕಾಯಂ ನಿವಾಸಿಗಳಾಗಿದ್ದು, ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹಗೂ ಆಧಾರ್, ಪ್ಯಾನ್ ಸಂಖ್ಯೆಯನ್ನು ಹೊಂದಿರಬೇಕು. ಕಾಗದರಹಿತ ಡಿಜಿಟಲ್ ಬ್ಯಾಂಕಿಂಗ್ ಗ್ರಾಹಕರಿಗೆ ಇಂಡಿಯಾ ಪೆÇೀಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಗಳನ್ನು ಒದಗಿಸುತ್ತದೆ. ಸಾಮಾನ್ಯ ಜನರಿಗೆ ಆರ್ಥಿಕ ಸಾಕ್ಷರತೆಯನ್ನು ಖಾತ್ರಿಪಡಿಸುವ, ಆ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಬ್ಯಾಂಕ್‍ಗಳು ಸೇರಿದಂತೆ ಹಣಕಾಸು ಸಂಸ್ಥೆಗಳ ಮೂಲಕ ಹಣದ ವಹಿವಾಟು ಮಾಡಲು ಸಾಧ್ಯವಾಗದವರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಯೋಜನೆ ಆರಂಭಿಸಲಾಗಿದೆ.
ಎಲ್ಲಾ ಅಂಚೆ ಕಚೇರಿಗಳ ಪೆÇೀಸ್ಟ್‍ಮ್ಯಾನ್ ಯಾ ಗ್ರಾಮೀಣ ಡಾಕ್ ಸೇವಕರ ಮೂಲಕ ಕಳೆದ ನಾಲ್ಕು ವರ್ಷಗಳ ಸಕ್ರಿಯ ಸೇವೆಯೊಂದಿಗೆ ಭಾರತೀಯ ಪೆÇೀಸ್ಟ್ ಪೇಮೆಂಟ್ಸ್ ಮೂಲಕ ತಲುಪಲು ಸಾಧ್ಯವಾಗಿದೆ. ಜೀವ ವಿಮಾ ಸೇವೆಗಳೂ ಪ್ರಸ್ತುತ ಲಭ್ಯವಿದೆ. ಉಳಿತಾಯ ಯಾ ಚಾಲ್ತಿ ಖಾತೆ ತೆರೆಯುವಿಕೆ, ಎಇಪಿಎಸ್-ಯಾವುದೇ ಬ್ಯಾಂಕ್ ಖಾತೆಯಿಂದ ಹಣ ಹಿಂತೆಗೆದುಕೊಳ್ಳುವಿಕೆ, ಡಿಎಂಟಿ ಮೂಲಕ ಯಾವುದೇ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಸೌಲಭ್ಯ, ಡಿಜಿಟಲ್ ಲೈಫ್ ಸರ್ಟಿಫಿಕೇಟ್, ನಿಧಿ ವರ್ಗಾವಣೆ (ಎನಿಎಫ್‍ಟಿ/ಐಎಂಪಿಎಸ್/ಯುಪಿಟಿ), ಬಿಲ್ ಪಾವತಿ, ವಾಹನ-ಆರೋಗ್ಯ ವಿಮೆ, ಕಾರ್ಡ್ ಯಾ ಪಿನ್ ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (7025224906)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅಂಚೆ ಇಲಾಖೆಯ ಬಿಸಿನೆಸ್ ಕರೆಸ್ಪಾಂಡೆಂಟ್ ನೇಮಕಾತಿ: ಅರ್ಜಿ ಆಹ್ವಾನ
0
ಜುಲೈ 30, 2022