ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಸಮಿತಿಗೆ ನೂತನವಾಗಿ ಆಯ್ಕೆಯಾದವರನ್ನು ಬದಿಯಡ್ಕ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ಘಟಕದ ಬದಿಯಡ್ಕ ಕಚೇರಿಯ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಯೂನಿಟ್ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಅಹಮ್ಮದ್ ಶರೀಫ್, ಕಾರ್ಯದರ್ಶಿ ಕೆ.ಜೆ.ಸಜಿ, ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ, ಉಪಾಧ್ಯಕ್ಷ ಗಣೇಶ ವತ್ಸ, ಜಿಲ್ಲಾ ಕಾರ್ಯಕಾರಿ ಸಮಿತಿಯ ರವಿ ನವಶಕ್ತಿ, ಯೂತ್ ವಿಂಗ್‍ನ ಕಾರ್ಯಕಾರಿ ಸಮಿತಿಯ ಮುಹಮ್ಮದ್ ಶಾಹಿದ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಸಮಿತಿಯ ವತಿಯಿಂದ ರಾಜ್ಯ ಕೌನ್ಸಿಲ್ ಸಮಿತಿಗೆ ಆಯ್ಕೆಯಾದ ಕುಂಜಾರು ಮುಹಮ್ಮದ್ ಹಾಜಿ ಅವರನ್ನೂ ಸನ್ಮಾನಿಸಲಾಯಿತು. ಇದೇ ಸಂದಭರ್Àದಲ್ಲಿ ಬದಿಯಡ್ಕ ಘಟಕದ ಸದಸ್ಯರಲ್ಲಿ ನಿಧನರಾದವರ ಕುಟುಂಬಗಳಿಗೆ ಹಾಗೂ ಅಸೌಖ್ಯದಲ್ಲಿರುವ ಸದಸ್ಯರಿಗೂ ಧನಸಹಾಯವನ್ನು ವಿತರಿಸಲಾಯಿತು. ಎಸ್.ಎನ್.ಮಯ್ಯ ಬದಿಯಡ್ಕ, ರಾಜುಸ್ಟೀಫನ್, ಹಮೀದ್ ಬರಾಕ, ಉದಯಶಂಕರ ಹಾಗೂ ಘಟಕದ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ನರೇಂದ್ರ ಬಿ.ಎನ್.ಸ್ವಾಗತಿಸಿ, ಕೋಶಾಧಿಕಾರಿ ಜ್ಞಾನದೇವ ಶೆಣೈ ನಿರೂಪಿಸಿದರು.