ಕಾಸರಗೋಡು: ಕಲ್ಲಕಟ್ಟ ಶ್ರೀ ಕೆ. ಜಿ. ಭಟ್ ಸ್ಮಾರಕ ಗ್ರಂಥಾಲಯದ ಆಶ್ರಯದಲ್ಲಿ ಕಲ್ಲಕಟ್ಟ ಎಂಎಯುಪಿ ಶಾಲೆಯಲ್ಲಿ ಬರಹಪೆಟ್ಟಿಗೆಯನ್ನು ಉದ್ಘಾಟಿಸಲಾಯಿತು. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಬರಹ ಪೆಟ್ಟಿಗೆಯನ್ನು ಸ್ಥಾಪಿಸಲಾಗಿದೆ.
ಬರಹ ಪೆಟ್ಟಿಗೆಯ ಉದ್ಘಾಟನೆ ಹಾಗೂ ಹಸ್ತಾಂತರವನ್ನು ಕಾಸರಗೋಡು ತಾಲೂಕು ಗ್ರಂಥಾಲಯ ಕಾರ್ಯದರ್ಶಿ ದಾಮೋದರನ್ ಪಿ. ನೆರವೇರಿಸಿದರು. ಜಯಲಕ್ಷ್ಮೀ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ಶಿವರಾಮ ಪಿ. ವಿ., ನಾರಾಯಣ ನಾಯರ್, ಪಾರ್ವತಿ, ಶಾಲಾ ಶಿಕ್ಷಕ ವಿನೋದ್, ಹರಿಕೃಷ್ಣ ಉಪಸ್ಥಿತರಿದ್ದರು. ವೇಣುಗೋಪಾಲ್ ಸ್ವಾಗತಿಸಿ, ಶಾಲಿನಿ ವಂದಿಸಿದರು. ಕರ್ನೇಲಿಯಸ್ ಲೋಬೋ ಕಾರ್ಯಕ್ರಮ ನಿರೂಪಿಸಿದರು.