ಲಖನೌ: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದ ಫೋಟೋವನ್ನ ಕಸದ ಬಂಡಿಯಲ್ಲಿ ಸಾಗಿಸಿ ಸುರಿದಿದ್ದಕ್ಕೆ ವ್ಯಕ್ತಿ ಕೆಲಸ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಮಥುರಾದಲ್ಲಿ ವ್ಯಕ್ತಿಯೊಬ್ಬ ಕಸದ ಬಂಡಿಯನ್ನು ತಳ್ಳುತ್ತಿರುವ ದೃಶ್ಯ ಕಂಡು ಬಂದಿತ್ತು.
ಬಿಸಾಡಿದ ವಸ್ತುಗಳ ರಾಶಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫ್ರೇಮ್ ಹಾಕಿದ ಫೋಟೊಗಳಿದ್ದವು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮುನ್ಸಿಪಲ್ ಕಾರ್ಪೊರೇಷನ್ ಉದ್ಯೋಗಿ ಕೆಲಸ ಕಳೆದುಕೊಂಡಿದ್ದಾರೆ.
ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅದು ಕಸದ ಬುಟ್ಟಿಯಲ್ಲಿತ್ತು. ಆದ್ದರಿಂದ ನಾನು ಅವುಗಳನ್ನು ನನ್ನ ಗಾಡಿಯಲ್ಲಿ ಹಾಕಿದ್ದೇನೆ ಎಂದು ವ್ಯಕ್ತಿ ವಿಡಿಯೋದಲ್ಲಿ
ರಾಜಸ್ಥಾನದ ಅಲ್ವಾರ್‌ನ ಕೆಲವು ಭಕ್ತರು ಕೈಯಲ್ಲಿ ಹಿಡಿದಿರುವ ಬಂಡಿಯೊಂದಿಗೆ ವ್ಯಕ್ತಿಯನ್ನು ಗುರುತಿಸಿ, ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ವಿಡಿಯೋ ಮಾಡುತ್ತಿದ್ದವರು ನಂತರ ಫೋಟೋಗಳನ್ನು ತೊಳೆದು ನಾವು ಈ ಫೋಟೋಗಳನ್ನು ನಮ್ಮೊಂದಿಗೆ ತೆಗೆದುಕೊಳ್ಳುತ್ತಿದ್ದೇವೆ. ಮೋದಿ ಜಿ ಮತ್ತು ಯೋಗಿ ಜಿ ಈ ದೇಶದ ಆತ್ಮ ಎಂದು ಹೇಳಿದ್ದಾರೆ.
ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋ ಕೂಡ ಅದರಲ್ಲಿ ಇತ್ತು. ಟ್ವಿಟರ್‌ನಲ್ಲಿ ಹಲವರು ಈ ವಿಡಿಯೋವನ್ನು ಟೀಕಿಸಿದ್ದಾರೆ
ವ್ಯಕ್ತಿಯು ತನ್ನ ಕಾರ್ಟ್‌ನಲ್ಲಿ ತಿಳಿಯದೆ ಫೋಟೋಗಳನ್ನು ಹಾಕಿದ್ದಾನೆ. ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು ತಕ್ಷಣದಿಂದಲೇ ಜಾರಿಗೆ ಬರುವಂತೆ ಅವನ ಕೆಲಸವನ್ನು ಕೊನೆಗೊಳಿಸಲಾಗಿದೆ ಎಂದು ನಗರ ನಿಗಮ ಮಥುರಾ-ವೃಂದಾವನದ ಪುರಸಭೆಯ ಹೆಚ್ಚುವರಿ ಆಯುಕ್ತ ಸತ್ಯೇಂದ್ರ ಕುಮಾರ್ ತಿವಾರಿ ಹೇಳಿದರು. ಹೇಳಿದ್ದಾರೆ.