ಭೋಪಾಲ: ಮತದಾನದ ಹಕ್ಕು ಹಾಗೂ ಪ್ರಜಾಪ್ರಭುತ್ವ ದೇಶದ ಅತಿ ದೊಡ್ಡ ಪ್ರಮಾದವಾಗಿದೆ ಎಂದು ಹೇಳಿಕೆ ನೀಡಿದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ (ಎಡಿಎಂ) ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರಕಾರ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಿದೆ.
ಭೋಪಾಲ: ಮತದಾನದ ಹಕ್ಕು ಹಾಗೂ ಪ್ರಜಾಪ್ರಭುತ್ವ ದೇಶದ ಅತಿ ದೊಡ್ಡ ಪ್ರಮಾದವಾಗಿದೆ ಎಂದು ಹೇಳಿಕೆ ನೀಡಿದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ (ಎಡಿಎಂ) ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರಕಾರ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಿದೆ.
ರಾಜ್ಯದ ಸ್ಥಳೀಯಾಡಳಿತದ ಮೊದಲ ಹಂತದ ಚುನಾವಣೆಯ ಮುನ್ನ ಶಿವಪುರಿ ಎಡಿಎಂ ಉಮೇಶ್ ಶುಕ್ಲಾ ನೀಡಿದ ಈ ಹೇಳಿಕೆ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಗೃಹ ಸಚಿವ ಹಾಗೂ ಸರಕಾರದ ವಕ್ತಾರ ನರೋತ್ತಮ ಮಿಶ್ರಾ, ''ಇದು ಗಂಭೀರ ವಿಚಾರ. ಎಡಿಎಂ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಾವು ನೋಟಿಸು ಜಾರಿ ಮಾಡಿದ್ದೇವೆ. ಅಲ್ಲದೆ, ಅವರನ್ನು ವರ್ಗಾಯಿಸಲು ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದೇವೆ'' ಎಂದು ಗುರುವಾರ ಹೇಳಿದ್ದಾರೆ.
ಮತಪತ್ರಗಳ ಕೊರತೆಯಿಂದ ನಮಗೆ ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ನಮ್ಮ ಮತಾಧಿಕಾರದ ಹಕ್ಕನ್ನು ಚಲಾಯಿಸಲು ಬೇಕಾದ ವ್ಯವಸ್ಥೆ ಮಾಡುವಂತೆ ಮನವಿ ಮಾಡಲು ಸಿಬ್ಬಂದಿ ಗುಂಪೊಂದು ಮತದಾನದ ಮುನ್ನಾ ದಿನವಾದ ಮಂಗಳವಾರ ಶುಕ್ಲಾ ಅವರನ್ನು ಭೇಟಿಯಾದ ಸಂದರ್ಭ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವೈರಲ್ ವೀಡಿಯೊದಲ್ಲಿ ಶುಕ್ಲಾ ಅವರು, ''ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಲ್ಲದಿದ್ದರೆ, ಅದು ನಿಮಗೆ ಹೇಗೆ ಹಾನಿ ಉಂಟು ಮಾಡುತ್ತದೆ? ಇದುವರೆಗೆ ಮತದಾನ ಮಾಡುವ ಮೂಲಕ ನಿಮಗೆ ಏನು ದೊರಕಿದೆ? ಎಷ್ಟು ಮಂದಿ ಭ್ರಷ್ಟ ಅಧಿಕಾರಿಗಳನ್ನು ನಾವು ಸೃಷ್ಟಿಸಿದ್ದೇವೆ? ಮತದಾನದ ಹಕ್ಕು ಹಾಗೂ ಪ್ರಜಾಪ್ರಭುತ್ವ ದೇಶದ ಅತಿ ದೊಡ್ಡ ಪ್ರಮಾದ ಎಂಬುದು ನನ್ನ ಭಾವನೆ'' ಎಂದು ಹೇಳುತ್ತಿರುವುದು ಕೇಳಿ ಬಂದಿದೆ.
ಚುನಾವಣಾ ಕರ್ತವ್ಯದಲ್ಲಿ ನಿರತರಾಗುವ ಸಿಬ್ಬಂದಿಗೆ ಪೋಸ್ಟಲ್ ಮತಪತ್ರದ ಮೂಲಕ ತಮ್ಮ ಮತ ಚಲಾಯಿಸುವ ಹಕ್ಕನ್ನು ಒದಗಿಸಬೇಕು.