ಮುಳ್ಳೇರಿಯ : ನಾಟೆಕಲ್ಲಿನ ಜನಾನುರಾಗಿ ಹಿರಿಯ ಉದ್ಯಮಿ ಎನ್.ದಾಮೋದರ ಬಲ್ಲಾಳ್ (85) ಹೃದಯಾಘಾತದಿಂದ ಬುಧವಾರ ತಡ ರಾತ್ರಿ 2 ಗಂಟೆಗೆ ಕಾಸರಗೋಡು ಖಾಸಗೀ ಆಸ್ಪತ್ರೆಯಲ್ಲಿ ವಿಧಿವಶವಾದರು. ಬೆಳ್ಳೂರು ಗ್ರಾಮ ಪಂಚಾಯತಿ ನಾಟೆಕಲ್ಲಿನಲ್ಲಿ ಹಿರಿಯ ಕಾಲದ ನಾಟಿವೈದ್ಯ ಕೃಷ್ಣಯ್ಯ ಬಲ್ಲಾಳರ ಪುತ್ರರಾದ ದಾಮೋದರ ಬಲ್ಲಾಳ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಕಳೆದ 64 ವರ್ಷಗಳಿಂದ ನಾಟೆಕಲ್ಲಿನಲ್ಲಿ ಬಲ್ಲಾಳ್ ಟ್ರೆಡರ್ಸ್ ಎಂಬ ಉದ್ಯಮ ಸಂಸ್ಥೆಯ ಮಾಲೀಕರಾಗಿ ಜನಾನುರಾಗಿಯಾಗಿದ್ದರು.ಗ್ರಾಮೀಣ ಪ್ರದೇಶದಲ್ಲಿ ವೈವಿಧ್ಯಮ ಉದ್ಯಮ ಸಂಸ್ಥೆಗಳನ್ನು ಸ್ಥಾಪಿಸಿ ಪೆÇ್ರೀತ್ಸಾಹಿಸುವಲ್ಲಿ ಆದರ್ಶಪ್ರಾಯರಾದ ಇವರು ಬಲ್ಲಾಳ್ ಸೌಂಡ್ಸ್ ಎಂಡ್ ಲೈಟಿಂಗ್ಸ್, ಬಲ್ಲಾಳ್ ಪ್ರಿಂಟರ್ಸ್,ಬಲ್ಲಾಳ್ ಕೃಷಿ ಉತ್ಪನ್ನ ಮಾರುಕಟ್ಟೆ, ಬೇಕರಿ ಉದ್ಯಮ ಮೊದಲಾದ ವಿವಿಧ ಜನೋಪಯೋಗಿ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಮುತುವರ್ಜಿವಹಿಸಿದ್ದರು. ಬುಧವಾರ ಬೆಳಗ್ಗೆ ಅಂಗಡಿಗೆ ಆಗಮಿಸಿದ್ದ ಇವರಿಗೆ ಹೃದಯ ನೋವು ಕಾಣಿಸಿಕೊಂಡಿದ್ದು ಕಾಸರಗೋಡು ಖಾಸಗೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ನಡುವೆ ವಿಧಿವಶವಾದರೆಂದು ತಿಳಿದು ಬಂದಿದೆ. ಮೃತರು ಪತ್ನಿ, ಪತ್ರಕರ್ತ ರಾಮಚಂದ್ರ ಬಲ್ಲಾಳ್ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನಗಲಿದ್ದಾರೆ.
ನಾಟೆಕಲ್ಲಿನ ಹಿರಿಯ ಉದ್ಯಮಿ ದಾಮೋದರ ಬಲ್ಲಾಳ್ ವಿಧಿ ವಶ
0
ಜುಲೈ 28, 2022
Tags