ನವದೆಹಲಿ: ಪ್ಯಾರಿಸ್‌ಗೆ ಹೊರಟಿದ್ದ ಕಾಶ್ಮೀರದ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ 'ಫೋಟೊ ಜರ್ನಲಿಸ್ಟ್' ಸನಾ ಇರ್ಷಾದ್ ಮಟ್ಟೊ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಶನಿವಾರ ತಡೆದಿದ್ದಾರೆ.
ನವದೆಹಲಿ: ಪ್ಯಾರಿಸ್‌ಗೆ ಹೊರಟಿದ್ದ ಕಾಶ್ಮೀರದ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ 'ಫೋಟೊ ಜರ್ನಲಿಸ್ಟ್' ಸನಾ ಇರ್ಷಾದ್ ಮಟ್ಟೊ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಶನಿವಾರ ತಡೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸನಾ, ಅಧಿಕಾರಿಗಳ ನಡೆಯ ವಿರುದ್ಧ ಕಿಡಿಕಾರಿದ್ದಾರೆ.
'ಪುಸ್ತಕ ಬಿಡುಗಡೆ ಹಾಗೂ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ವಿಮಾನದ ಮೂಲಕ ಪ್ಯಾರಿಸ್‌ಗೆ ತೆರಳಬೇಕಿತ್ತು. ಫ್ರಾನ್ಸ್ ದೇಶದ ವೀಸಾ ಇದ್ದರೂ ಕೂಡ ವಲಸೆ ಅಧಿಕಾರಿಗಳು ಪ್ಯಾರಿಸ್‌ಗೆ ಪ್ರಯಾಣಿಸದಂತೆ ತಡೆದಿದ್ದು ಅಚ್ಚರಿ ಮೂಡಿಸಿದೆ' ಎಂದು ಸನಾ ಟ್ವೀಟ್ ಮಾಡಿದ್ದಾರೆ.
ಸನಾ ಅವರನ್ನು ಬೆಂಬಲಿಸಿ ಕಾರ್ತಿ ಚಿದಂಬರಂ ಸೇರಿದಂತೆ ಹಲವರು ಟ್ವೀಟ್ ಮಾಡಿದ್ದು, ವಲಸೆ ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದಾರೆ.
ಸನಾ ಅವರು ವಿದೇಶಕ್ಕೆ ಪ್ರಯಾಣಿಸದಂತೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ನಿರ್ಬಂಧ ವಿಧಿಸಿರುವುದರಿಂದಾಗಿ ಅವರನ್ನು ನಿಲ್ದಾಣದಲ್ಲಿ ತಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.