ಕುಂಬಳೆ: 'ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ' ಎಂಬ ಯೋಜನೆಯನ್ವಯ ಕ್ಯಾಂಪ್ಕೋ ಸಂಸ್ಥೆಯ ಕುಂಬಳೆ ಶಾಖೆ ಸದಸ್ಯ ಕುತ್ತಿಕ್ಕಾರು ನಿವಾಸಿ ಗಣೇಶ ಭಂಡಾರಿ ಅವರ ಹೃದಯ ಶಸ್ತ್ರ ಚಿಕಿತ್ಸೆಗೆ ಸಂಸ್ಥೆ ವತಿಯಿಂದ ಆರ್ಥಿಕ ಸಹಾಯ ವಿತರಿಸಲಾಯಿತು.
ಗಣೇಶ್ ಭಂಡಾರಿ ಅವರ ನಿವಾಸಕ್ಕೆ ತೆರಳಿ 50ಸಾವಿರ ರು. ಮೊತ್ತದ ಧನಸಹಾಯದ ಚೆಕ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಕ್ಯಾಂಪ್ಕೋ ನಿರ್ದೇಶಕ ಪಿ.ಸುರೇಶ್ ಕುಮಾರ್ ಶೆಟ್ಟಿ ಚೆಕ್ ಹಸ್ತಾಂತರಿಸಿದರು. ಸಂಸ್ಥೆ ಬದಿಯಡ್ಕ ವಲಯ ಪ್ರಬಂಧಕ ಗಿರೀಶ್ ಇ, ನೀರ್ಚಾಲು ಶಾಖಾ ಪ್ರಬಂಧಕ ಜಯನ್ ಇ, ಕುಂಬಳೆ ಶಾಖಾ ಪ್ರಭಾರ ಪ್ರಬಂಧಕ ಯಜ್ಞೇಶ್ ಕೆ.ಕೆ ಉಪಸ್ಥಿತರಿದ್ದರು.