ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿ ಭಾಷೆಯಲ್ಲಿ ಬರೆದಿರುವ ಕವನಗಳನ್ನು ಇಂಗ್ಲಿಷ್‌ಗೆ ಅನುವಾದಿಸಲಾಗಿದೆ. ಅನುವಾದಿತ ಕೃತಿ 'ಲೆಟರ್ಸ್ ಟು ಸೆಲ್ಫ್', ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಮೂಲ ಕೃತಿ 'ಆಂಖ್ ಕಾ ಧನ್ಯ ಛೆ' ಅನ್ನು 2007ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕವನಗಳನ್ನು ಪತ್ರಕರ್ತೆ ಹಾಗೂ ಇತಿಹಾಸ ತಜ್ಞೆ ಭಾವನಾ ಸೋಮಾಯಾ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದು, 'ಫಿಂಗರ್‌ಪ್ರಿಂಟ್ ಪಬ್ಲಿಷಿಂಗ್' ಸಂಸ್ಥೆಯು ಪ್ರಕಟಿಸಿದೆ.
' ಪ್ರಗತಿ, ಹತಾಶೆ, ಅನ್ವೇಷಣೆ, ಧೈರ್ಯ ಹಾಗೂ ಸಹಾನುಭೂತಿಯಂತಹ ವಿಷಯಗಳನ್ನಿಟ್ಟುಕೊಂಡು ಮೋದಿ ಕವನ ರಚಿಸಿದ್ದಾರೆ. ಅವರ ಭಾವನೆಗಳ ಮಂಥನವನ್ನು ಈ ಕವನಗಳು ಹಿಡಿದಿಟ್ಟಿವೆ. ಅವರ ಉತ್ಸಾಹ, ಉಮೇದನ್ನು ಈ ಕವನಗಳಲ್ಲಿ ಕಾಣಬಹುದು' ಎಂದು ಅನುವಾದಕಿ ಭಾವನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಈ ಕೃತಿ ಕವನ ಪ್ರಿಯರಿಗೆ ಇಷ್ಟವಾಗುತ್ತವೆ. ಅನುವಾದವೂ ಅದ್ಭುತವಾಗಿದೆ' ಎಂದು ಫಿಂಗರ್‌ಪ್ರಿಂಟ್ ಪಬ್ಲಿಷಿಂಗ್‌ನ ಕಾರ್ಯನಿರ್ವಾಹಕ ಪ್ರಕಾಶಕ ಶಂತನು ದತ್ತಗುಪ್ತಾ ಹೇಳಿದ್ದಾರೆ.