ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಇತ್ತೀಚೆಗೆ ಶಾಲಾ ಸಂಚಾಲಕ ಪËಲ್ ಸಿಕ್ವೇರಾ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಸೇವೆ ಸಲ್ಲಿಸಿದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ನಂತರ ನೂತನ ಪದಾಧಿಕಾರಿಗಳನ್ನು ಸರ್ವಾನುಮತೆಯಿಂದ ಆಯ್ಕೆ ಮಾಡಲಾಯಿತು. ಪಿ.ಟಿ.ಎ ಸಂಘದ ಅಧ್ಯಕ್ಷರಾಗಿ ಸಿತಾರಾಮ್ ಬೆರಿಂಜಾ, ಮಾತ್ರೃ ಸಂಘದ ಅಧ್ಯಕ್ಷೆ ಲವೀನಾ ಮೊಂತೇರೊ, ಶಾಲಾ ಬೆಂಬಲ ಸಮಿತಿಯ ಅಧ್ಯಕ್ಷರಾಗಿ ಸರಿತಾ ನಾಯ್ಕ್‍ರವರನ್ನು ಆಯ್ಕೆಯಾದರು.
ಶಾಲಾ ಸಂಚಾಲಕರು ಸಮಾರಂಭಕ್ಕೆ ಶುಭ ಹಾರೈಸಿ ತಮ್ಮ ಸಂದೇಶವನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ಹೆತ್ತವರಿಗೆ ಶಾಲಾ ನಿಯಮಗಳನ್ನು ಹಾಗೂ ಶಾಲೆಯ ಸಮಗ್ರ ಮಾಹಿತಿಯನ್ನು ನೀಡಿದರು. ಶಿಕ್ಷಕ ರೋಮನ್ ಡಿಸೋಜ ಸ್ವಾಗತಿಸಿ, ಶಿಕ್ಷಕಿ ಒಲಿವಿಯ ಡಿಸೋಜ ವಂದಿಸಿದರು. ನಿಶಾವಿನಾ ಕಾರ್ಯಕ್ರಮವನ್ನು ನಿರೂಪಿಸಿದರು.