ಮಂಜೇಶ್ವರ: "ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು" ಕಲಾ ಸಂಘದ ವತಿಯಿಂದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರದ ಸಹಕಾರದೊಂದಿಗೆ ರಾಮಾಯಣ ಮಾಸಾಚಾರಣೆಯ ಪ್ರಯುಕ್ತ ಆ. 9ರಿಂದ 15ರವರೆಗೆ
ಯಕ್ಷಚಿಗುರು -2022, ತಾಳಮದ್ದಳೆ ಸಪ್ತಾಹ ಜರಗಲಿದ್ದು ಆ ಬಗೆಗಿನ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಶ್ರೀಗಳು ಚಿಗುರುಪಾದೆ ದೇವಸ್ಥಾನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಸಂಸ್ಥೆಯ ಗೌರವಧ್ಯಕ್ಷರಾದ ಕುಳೂರು ಕನ್ಯಾನ ಶ್ರೀ ಸದಾಶಿವ ಶೆಟ್ಟಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಬಿಡುಗಡೆ ಗೊಳಿಸಿದರು.
ಸಮಾರಂಭದಲ್ಲಿ ವಸಂತ ಭಟ್ ತೊಟ್ಟೆತ್ತೋಡಿ, ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಪೂವಪ್ಪ ಮೂಲ್ಯ, ವೇ.ಮೂ.ಹರಿನಾರಾಯಣ ಮಯ್ಯ ಬಜೆ, ವೇ.ಮೂ.ಗಣೇಶ ನಾವಡ ಮೀಯಪದವು, ರಾಜಾರಾಮ ರಾವ್ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ಮನೋಜ್ ಕದ್ರಿ, ಶ್ರೀಧರರಾವ್ ಆರ್. ಎಂ., ವಿಶ್ವನಾಥನ್ ಮಸ್ಕತ್ ಉಪಸ್ಥಿತರಿದ್ದರು. ರಾಜಾರಾಮ ರಾವ್ ನಿರ್ವಹಿಸಿದರು.