ಮೋಹನ್ ಲಾಲ್ ಮತ್ತು ಕೀರ್ತಿ ಸುರೇಶ್ ಅವರು ಯಾವುದೇ ಸಂಭಾಷಣೆಗಳಿಲ್ಲದ ಮಲಯಾಳಂ ಚಿತ್ರವಾದ ನೀಲರಾತ್ರಿಯ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರವನ್ನು ಅಶೋಕ್ ನಾಯರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಭಗತ್ ಮ್ಯಾನುಯೆಲ್, ಹಿಮಾ ಶಂಕರಿ, ವೈಗಾ, ವಿನೋದ್ ಕುಮಾರ್, ಸುಮೇಶ್ ಸುರೇಂದ್ರನ್ ಮತ್ತು ಬೇಬಿ ವೇದಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರೊಮ್ಯಾನ್ಸ್ ಮತ್ತು ಸಸ್ಪೆನ್ಸ್‍ಗೆ ಒತ್ತು ನೀಡಿ ಈ ಥ್ರಿಲ್ಲರ್ ಚಿತ್ರವನ್ನು ನಿರ್ಮಿಸಲಾಗಿದೆ. ಎಸ್‍ಬಿ ಪ್ರಜಿತ್ ಅವರ ಛಾಯಾಗ್ರಹಣವಿದೆ. ಅಶೋಕ್ ನಾಯರ್ ಬರೆದು ನಿರ್ದೇಶಿಸಿರುವ 'ನೀಲರಾತ್ರಿ'ಯನ್ನು ಡಬ್ಲ್ಯು ಜೆ ಪೆÇ್ರಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜಾಬಿ ಮ್ಯಾಥ್ಯೂ ನಿರ್ಮಿಸಿದ್ದಾರೆ.
ಸಹಾಯಕ ನಿರ್ದೇಶಕ- ಪ್ರಶಾಂತ್ ಕಣ್ಣೂರು, ಹಣಕಾಸು ನಿಯಂತ್ರಕ- ಎಂ. ಕೆ. ನಂಬಿಯಾರ್, ಪ್ರೊ- ಎ.ಎಸ್. ದಿನೇಶ್. ಸಹಾಯಕ ನಿರ್ಮಾಪಕ- ಶಿಲಿನ್ ಭಗತ್. ಅರುಣ್ ರಾಜ್ ಸಂಗೀತ, ಸನ್ನಿ ಜೇಕಬ್ ಸಂಕಲನ. ಕಾರ್ಯಕಾರಿ ನಿರ್ಮಾಪಕರು- ಅಖಿಲ್ ಸದಾನಂದನ್, ಅನೂಪ್ ವೇಣುಗೋಪಾಲ್.