ತಿರುವನಂತಪುರ: ಜೈಲಿನಿಂದ ಜಿಗಿಯಲು ಯತ್ನಿಸಿದ ಆರೋಪಿ ಮರಕ್ಕೆ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಕೆಳಗಿಳಿಸಲು ಪೆÇಲೀಸರು ಮತ್ತು ಜೈಲು ಅಧಿಕಾರಿಗಳು ಪ್ರಯತ್ನ ಮುಂದುವರೆಸಿದ್ದಾರೆ.
ಇಂದೀಗ ಸಂಜೆ ವೇಳೆ ಘಟನೆ ನಡೆದಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಸುಭಾಷ್ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಇದು ಅಧಿಕಾರಿಗಳ ಗಮನ ಸೆಳೆಯಿತು. ಇದಾದ ಬಳಿಕ ಸುಭಾಷ್ ಮಹಿಳಾ ಮಂದಿರದ ಬಳಿ ಮರಗಳಿರುವತ್ತ ನುಗ್ಗಿದ.
ಅಧಿಕಾರಿಗಳು ಅವರನ್ನು ಕೆಳಗಿಳಿಯುವಂತೆ ಹೇಳಿದರೂ ನಿರಾಕರಿಸಿದನು. ಇದರಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಆತನ ಮನವೊಲಿಸಿ ಕೆಳಗಿಳಿಸುವ ಪ್ರಯತ್ನ ನಡೆದಿದೆ. ಕೆಳಭಾಗವು ದಟ್ಟ ಮರ ಗಿಡಗಳನ್ನು ಹೊಂದಿದೆ.
ಏಳು ತಿಂಗಳ ಹಿಂದೆ ಪೂಜಾಪುರ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ ಖೈದಿಯಾಗಿದ್ದಾನೆ. ಈತ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ.