ಬದಿಯಡ್ಕ: ಕಳೆದ ಅನೇಕ ವರ್ಷಗಳಿಂದ ಆಡಳಿತವನ್ನು ನಡೆಸುತ್ತಿರುವ ಯುಡಿಎಫ್ ನೇತೃತ್ವದ ಬದಿಯಡ್ಕ ಗ್ರಾಮಪಂಚಾಯಿತಿ ಆಡಳಿತವು ಜನತೆಗೆ ನ್ಯಾಯವನ್ನು ಒದಗಿಸಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಅದು ವಿಫಲತೆಯನ್ನು ಕಂಡಿದೆ. ಇದು ಉಪಚುನಾವಣೆಯಾಗಿದ್ದು, ವಾರ್ಡಿನ ಸಂಪೂರ್ಣ ಅಬಿವೃದ್ಧಿ ತಳಮಟ್ಟದವರೆಗೆ ತಲುಪಲು ಬಿಜೆಪಿಯ ಗೆಲುವು ಅನಿವಾರ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದರು.
ಬದಿಯಡ್ಕ ಗ್ರಾಮಪಂಚಾಯಿತಿ 14ನೇ ಪಟ್ಟಾಜೆ ವಾರ್ಡ್ ಉಪ ಚುನಾವಣೆಯ ಪ್ರಯುಕ್ತ ಚುಕ್ಕಿನಡ್ಕದಲ್ಲಿ ಜರಗಿದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ ರವೀಶ ತಂತ್ರಿ ಕುಂಟಾರು, ಉಪಾಧ್ಯಕ್ಷರುಗಳಾದ ಎಂ. ಸುಧಾಮ ಗೋಸಾಡ, ರಾಮಪ್ಪ ಮಂಜೇಶ್ವರ, ಮಹಿಳಾ ಮೊರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ. ಎಲ್., ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಶಿವ ಕೃಷ್ಣ ಭಟ್, ರಾಜ್ಯ ಕೌನ್ಸಿಲ್ ಸದಸ್ಯೆ ಪ್ರಮೀಳಾ ಸಿ ನಾ0iÀiï್ಕ, ಪಟ್ಟಾಜೆ ವಾರ್ಡ್ ಚುನಾವಣಾ ಸಮಿತಿ ಅಧ್ಯಕ್ಷ ವೆಂಕಪ್ಪ ನಾ0iÀiï್ಕ, ಅಭ್ಯರ್ಥಿ ಮಹೇಶ್ ವಳಕ್ಕುಂಜ, ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಎಸ್‍ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಈಶ್ವರ ಮಾಸ್ತರ್, ಬದಿಯಡ್ಕ ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮುಂಡೋಳುಮೂಲೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ರೈ, ಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರು ಕುಟುಂಬ ಸಂಗಮದಲ್ಲಿ ಪಾಲ್ಗೊಂಡಿದ್ದರು.