ತಿರುವನಂತಪುರ: ತಿರುವನಂತಪುರಂನ ಅಕ್ಕುಳಂನಲ್ಲಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಮಹಿಳೆ ಸೇರಿದಂತೆ ನಾಲ್ವರನ್ನು ಪೋಲೀಸರು ಬಂಧಿಸಿದ್ದಾರೆ.
ಅಕ್ಕುಳಂ ನಿಶ್ ಬಳಿ ವಾಸಿಸುತ್ತಿದ್ದ ಬಾಡಿಗೆದಾರರಿಂದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಪೋಲೀಸರಿಗೆ ದೊರೆತ ಗೌಪ್ಯ ಮಾಹಿತಿ ಆಧರಿಸಿ ಶ್ರೀಕರಿಯಂ ಪೋಲೀಸರು ತನಿಖೆ ನಡೆಸಿದ್ದಾರೆ.
ಶನಿವಾರ ಸಂಜೆ ಪಂದಳಂನಲ್ಲಿ ಪೋಲೀಸರು ನಡೆಸಿದ ದಾಳಿಯಲ್ಲಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಪಂದಳಂ ಪೋಲೀಸರು ಮಹಿಳೆ ಸೇರಿದಂತೆ ಐವರು ಸದಸ್ಯರ ಗುಂಪಿನಿಂದ 154 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಘಟನೆಯಲ್ಲಿ ಪಾಲಗೋಡಿನ ರಾಹುಲ್, ಕುನ್ನಿಕೋಡಿನ ಶಾಹಿನಾ, ಪಳ್ಳಿಕಲ್‍ನ ಆರ್ಯನ್, ಪಂದಳಂನ ವಿಧು ಕೃಷ್ಣನ್ ಮತ್ತು ಕೊಡುಮನೆಯ ಸಜಿನ್ ಬಂಧಿತರು.
ತಿರುವನಂತಪುರದಲ್ಲಿ ಎಂಡಿಎಂಎ ವಶ; ಮಹಿಳೆ ಸೇರಿದಂತೆ ನಾಲ್ವರ ಬಂಧನ
0
ಜುಲೈ 31, 2022
Tags