ಪಾಲಕ್ಕಾಡ್: ಆರ್‍ಎಸ್‍ಎಸ್ ಕಾರ್ಯಕರ್ತನ ಮನೆಯ ಅಂಗಳದಲ್ಲಿ ಹಸುವನ್ನು ಕೊಂದು ಬಿಸಾಡಿರುವ ಘಟನೆ ನಡೆದಿದೆ. ಆರ್‍ಎಸ್‍ಎಸ್ ರಾಮಪುರಂ ಮಂಡಲ್0 ಶಾಖೆಯ ಶಾರಿಕ್ ಶಿಕ್ಷಕ್ ಶ್ಯಾಮ್ ಮತ್ತು ಅವರ ಪತ್ನಿ ಮಹಿಳಾ ಮೋರ್ಚಾ ಪಥಿಯೂರು ಪಂಚಾಯತ್‍ನ ಪ್ರಧಾನ ಕಾರ್ಯದರ್ಶಿ ಅದಿರಾ ಶ್ಯಾಮ್ ಅವರು ವಾಸಿಸುವ ಬಾಡಿಗೆ ಮನೆಯ ಮುಂದೆ ಹಸುವನ್ನು ಕೊಂದು ಬಿಸಾಡಿರುವುದು ನಿನ್ನೆ ಪತ್ತೆಯಾಗಿದೆ.
ಎರಡು ತಿಂಗಳ ಹಸುವಿನ ಕರುವಿನ ಮೃತದೇಹ ನಿನ್ನೆ ಬೆಳಗ್ಗೆ ಎಸೆದು ಹೋಗಿರುವುದು ಪತ್ತೆಯಾಗಿದೆ. ಮೂಗು ಬಾಯಿ ಛಿದ್ರಗೊಂಡಿದ್ದು, ಸುತ್ತಮುತ್ತಲಿನ ಮನೆಗಳಲ್ಲಿ ಹಸುವಿನ ಬಗ್ಗೆ ವಿಚಾರಿಸಿದರೂ ಕರು ಆ ವಠಾರದ್ದಲ್ಲವೆಂದು ತಿಳಿದುಬಂದಿದೆ. ಈ ಕುರಿತು ಕರಿಳಿಕುಳಂಗರ ಪೋಲೀಸರಿಗೆ ದೂರು ನೀಡಿರುವುದಾಗಿ ಶ್ಯಾಮ್ ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕರಿಳಕುಳಂಗರ ಸಿಐ ಸುಧೀಲಾಲ್ ತಿಳಿಸಿದ್ದಾರೆ. ಇಂದು ಪಶುವೈದ್ಯರ ನೇತೃತ್ವದಲ್ಲಿ ಹೂಳಲಾದ ಕರುವಿನ ಕಳೇಬರಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಸಿಐ ತಿಳಿಸಿದ್ದಾರೆ.