ಕೊಟ್ಟಾಯಂ: ಕಾಲೇಜು ಕಟ್ಟಡದ ಮೇಲಿಂದ ಜಿಗಿದ ವಿದ್ಯಾರ್ಥಿನಿಯೋರ್ವೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೊಟ್ಟಾಯಂನ ಬಿಸಿಎಂ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪಂದಳ ಎಡಪ್ಪಾಲ್ ಎಂಬಲ್ಲಿಯ ದೇವಿಕಾ (18) ಇಂದು ಮುಂಜಾನೆ ಕಟಗಟಡದಿಂದ ಕೆಳಗೆ ಜಿಗಿದು ಗಂಭೀರ ಗಾಯಗೊಂಡರು. ಮೂರನೇ ವರ್ಷದ ಪದವಿ ವಿದ್ಯಾರ್ಥಿನಿ.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ವಿದ್ಯಾರ್ಥಿ ಕಟ್ಟಡದ ಮೊದಲ ಮಹಡಿಯಿಂದ ಜಿಗಿದಿದ್ದಾಳೆ. ಬಾಲಕಿಯ ಕೈ, ಕಾಲು ಮತ್ತು ತಲೆಗೆ ಗಾಯಗಳಾಗಿತ್ತು. ಕೂಡಲೇ ಬಾಲಕಿಯನ್ನು ಕಾಲೇಜು ಅಧಿಕಾರಿಗಳು ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದರು.
ಬಹಳ ದಿನಗಳಿಂದ ದೇವಿಕಾ ಖಿನ್ನತೆಗೆ ಒಳಗಾಗಿದ್ದರು ಎಂದು ಸ್ನೇಹಿತರು ಹೇಳುತ್ತಾರೆ. ಕೌಟುಂಬಿಕ ಸಮಸ್ಯೆಗಳು ತುಂಬಾ ಕಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇವಿಕಾ ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಇದು ಎರಡನೇ ಬಾರಿ. ಚಿಕಿತ್ಸೆ ವೇಳೆ ಬಾಲಕಿ ತಾನು ಜಿಗಿಯಬೇಕು ಎಂಬ ಕಾರಣಕ್ಕೆ ಕಟ್ಟಡದ ಮೇಲಿನಿಂದ ಜಿಗಿದಿರುವುದಾಗಿ ಪೆÇಲೀಸರಿಗೆ ಹೇಳಿಕೆ ನೀಡಿದ್ದಾಳೆ.