ಮುಳ್ಳೇರಿಯ: ಬಾನಂ ಜಿಎಚ್‍ಎಸ್‍ನಲ್ಲಿ ಚಂದ್ರನೋತ್ಸವ ನಿಮಿತ್ತ ವಿವಿಧ ಶಾಲಾ ಕ್ಲಬ್‍ಗಳ ಉದ್ಘಾಟನೆ ಹಾಗೂ ಚಂದ್ರನೋತ್ಸವ ಕಾರ್ಯಕ್ರಮ ನಡೆಯಿತು. ಲೇಖಕ ಹಾಗೂ ಶಿಕ್ಷಕ ವರ್ಗೀಸ್ ನರ್ಕಿಲಕಾಡ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಪಿ. ರಾಜೀವ್ ಅಧ್ಯಕ್ಷತೆ ವಹಿಸಿದ್ದರು. ಎಸ್ ಎಂಸಿ ಉಪಾಧ್ಯಕ್ಷ ಪಾಚ್ಚೇನಿ ಕೃಷ್ಣನ್, ಹಿರಿಯ ಸಹಾಯಕ ಪಿ.ಕೆ.ಬಾಲಚಂದ್ರನ್, ವಿದ್ಯಾರಂಗದ ಸಂಯೋಜಕ ಅನೂಪ್ ಪೆರಿಯಾಲ್, ಸೈನ್ಸ್ ಕ್ಲಬ್ ಸಂಚಾಲಕಿ ಪಿ.ವಿ.ಪ್ರಿಯಾ, ಟಿ.ವಿ.ಪವಿತ್ರನ್ ಮಾತನಾಡಿದರು. ಮುಖ್ಯಶಿಕ್ಷಕಿ ಕೆ. ಎಂ.ರಮಾದೇವಿ ಸ್ವಾಗತಿಸಿ, ಸಿಬ್ಬಂದಿ ಕಾರ್ಯದರ್ಶಿ ಎಂ.ವಿ.ಸಂಜಯನ್ ವಂದಿಸಿದರು. ಲೂನಾರ್ ಡೇ ರಸಪ್ರಶ್ನೆ, ಲೂನಾರ್ ಡೇ ಆವೃತ್ತಿ ಬಿಡುಗಡೆ, ವಿಡಿಯೋ ಪ್ರದರ್ಶನ ಹಾಗೂ ಬಶೀರ್ ಸಂಸ್ಮರಣಾ ಕೊಠಡಿ ಉದ್ಘಾಟನೆ ನಡೆಯಿತು.
ಚಾಂದ್ರ ದಿನಾಚರಣೆ ಹಾಗೂ ವಿವಿಧ ಕ್ಲಬ್‍ಗಳ ಉದ್ಘಾಟನೆ
0
ಜುಲೈ 29, 2022