HEALTH TIPS

ನೀವು ಸಹ ಈ ರೀತಿ ಯೋಚಿಸುತ್ತಿದ್ದರೆ ನಿಮ್ಮ ಮೇಲೆ ನೀವೇ ಒತ್ತಡ ಹಾಕುತ್ತಿದ್ದೀರಾ ಎಂದರ್ಥ!

 ಯಾವುದೇ ವ್ಯಕ್ತಿಯ ಪೂರ್ಣ ಆರೋಗ್ಯಕ್ಕೆ, ಕೌಶಲ ಸಾಮರ್ಥ್ಯ ಸಾಧನೆಗಳಿಗೆ ಆತನ ಮನಸ್ಸೇ ಪ್ರಮುಖ ಪಾತ್ರ ವಹಿಸಿರುತ್ತೆ. ಆತನ ಮನಸ್ಸು ಚೆನ್ನಾಗಿದ್ದರೆ ಆತ ಚೆನ್ನಾಗಿ ಯೋಚಿಸಬಲ್ಲ. ಯೋಚಿಸಿ ಏನಾದರೂ ಸಾಧನೆ ಮಾಡಬಲ್ಲ. ಸೂಕ್ತ ಪರಿಹಾರ ಕಂಡುಕೊಳ್ಳಬಲ್ಲ. ಮನಸ್ಸು ಸರಿ ಇಲ್ಲದಿದ್ದರೆ ಎಲ್ಲ ಕಡೆಯೂ ವೈಫಲ್ಯ.

ಉದಾಹರಣೆಗೆ ಬೇರೆ ಕಡೆ ಕೆಲಸ ಸಿಕ್ಕಿತೆಂದು ಮೊದಲ ಸಂಸ್ಥೆ ಬಿಟ್ಟುಬಿಡುತ್ತಾನೆ. ಮತ್ತೆ ಯಾಕೆ ಕೆಲಸ ಬಿಟ್ಟೆ ಎಂದು ಬಳಿಕ ಕೊರಗುತ್ತಾನೆ. ಇಂತಹ ಅನುಭವ ಅನೇಕರಿಗೆ ಬಂದಿರಬಹುದು. ಇದಕ್ಕೆಲ್ಲ ಕಾರಣ ನಮ್ಮ ಮನಸ್ಸು. ಉದಾಹರಣೆಗೆ ಕೆಲಸ ಬಿಟ್ಟಿದ್ದೇನೆ ಹೊಸ ಕಂಪನಿ ಚೆನ್ನಾಗಿದೆ ಎಂದು ಮನಸ್ಸಿಗೆ ಹೇಳಿಕೊಂಡರೆ ಅಲ್ಲಿಗೆ ಸಮಸ್ಯೆ ಮುಗಿದಂತೆ. ಆದರೆ ಆ ರೀತಿಯ ಬದಲು ಬೇರೆ ಏನೋ ಯೋಚಿಸುತ್ತೇವೆ. ದಿನ ನಿತ್ಯ ತನ್ನನ್ನು ತಾನು ದ್ವೇಷಿಸುತ್ತೇವೆ. ನಿರಾಶೆಗೊಳ್ಳುತ್ತೇವೆ.

ಒಂದು ಬಾರಿ ಮಾಡಿದ ತಪ್ಪಿಗೆ ನಮ್ಮನ್ನು ನಾವು ಶಪಿಸುತ್ತೇವೆ?. ನಾವು ಮಾಡಲು ಬಯಸಿದ್ದನ್ನು ಮಾಡಿದ್ದಕ್ಕಾಗಿ ಕೊರಗುತ್ತೇವೆ?. ನಾವು ಬೇರೆಯವರಿಗಿಂತ ಕಮ್ಮಿ ಇದ್ದೇವೆ ಎಂದು ಚಿಂತಿಸುತ್ತೇವೆ. ನಾವು ಮತ್ತೆ ಮತ್ತೆ ಸೋಲುತ್ತಿದ್ದೇವೆ ಎಂದು ನೊಂದು ಕೊಳ್ಳುತ್ತೇವೆ. ಆದರೆ ಇಂಥ ಯೋಚನೆಗಳು ಬಂದರೆ ಖಂಡಿತ ಅದಕ್ಕೆ ಸಪೋರ್ಟ್ ಮಾಡಲು ಹೋಗಬೇಡಿ. ಯಾಕೆಂದರೆ ನಮ್ಮ ಜೀವನವೇ ನಾಶ ಆಗಬಹುದು. ಇದಕ್ಕೆಲ್ಲ ಮನಸ್ಸು, ಈ ಮನಸ್ಸಿಗೆ ತಿಳಿ ಹೇಳಿದರೆ ಖಂಡಿತ ನಾವು ಜಯಿಸಬಹುದು. ಹಾಗಾದ್ರೆ ಯಾವ್ ವಿಚಾರಗಳನ್ನು ನಾವು ಯೋಚಿಸಬಾರದು? ಯಾವ ಕಾರಣಕ್ಕೆ ನಮ್ಮನ್ನು ನಾವು ದೂಷಿಸಬಾರದು? ನಮ್ಮ ತನವನ್ನು, ನಮ್ಮ ಆತ್ಮ ವಿಶ್ವಾಸವನ್ನು ನಾವು ಕಾಪಾಡುವುದು ಹೇಗೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

1.ನಿಮ್ಮ ಐಡಿಯಾಗಳಿಗೆ ನೀವು ಬೆಲೆ ಕೊಡುವುದಿಲ್ಲ! ನೀವು ತುಂಬಾನೇ ಅಲೋಚನೆ ಮಾಡುವ ವ್ಯಕ್ತಿ ಆಗಿರುತ್ತೀರಿ. ಅತ್ಯಂತ ಸೃಜನಶೀಲವಾಗಿ ಯೋಚಿಸಿ ಐಡಿಯಾ ಕಂಡು ಹುಡುಕುತ್ತೀರಿ. ಆದರೆ ಈ ಬಗ್ಗೆ ಬೇರೆಯವರ ಬಳಿ ಶೇರ್ ಮಾಡಿಕೊಳ್ಳುವ ಮೊದಲೇ ಇದೆಂಥಾ ಡಬ್ಬ ಐಡಿಯಾ ಹುಡುಕಿದೆ ಎಂದು ತನ್ನನ್ನು ತಾನು ತೆಗಳುಕೊಳ್ಳುತ್ತೀರಿ. ಇದು ಅತ್ಯಂತ ಕೆಟ್ಟ ಸಂಕೇತ ಇದು, ನಿಮ್ಮನ್ನು ನೀವು ಅತ್ಯಂತ ಕೆಟ್ಟದಾಗಿ ನಡೆಸುವ ವಿಧಾನ. ಉತ್ತಮ ಅಲೋಚನೆ ಇದ್ದರೆ ಉತ್ತಮ ಐಡಿಯಾ ಬರುತ್ತದೆ. ಇದನ್ನು ಬೇರೆಯವರ ಬಳಿ ಶೇರ್ ಮಾಡಿದರೆ ಮಾತ್ರ ಅದು ಚೆನ್ನಾಗಿದ್ಯೋ ಇಲ್ಲವೋ ಎಂದು ತಿಳಿಯುತ್ತದೆ. ಹೀಗಾಗಿ ನಮ್ಮ ಮೇಲೆ ನಾವು ನಂಬಿಕೆ ಇರಿಸಿಕೊಳ್ಳಬೇಕು. ಈ ರೀತಿಯ ಯೋಚನೆ ನಿಮ್ಮ ಬಗ್ಗೆ ಸಾಕಷ್ಟು ನಂಬಿಕೆ ಇಲ್ಲದಿರುವುದು ಅಥವಾ ನಿಮ್ಮನ್ನು ಸಾರ್ವಕಾಲಿಕವಾಗಿ ಟೀಕಿಸುವ ಮೂಲಕ ನೀವು ಸಾಕಷ್ಟು ಒಳ್ಳೆಯವರಲ್ಲ ಎಂದು ಭಾವಿಸುವುದಾಗಿದೆ. ಈ ರೀತಿ ಮಾಡಿದರೆ ನಮ್ಮ ಮೇಲಿನ ಆತ್ಮವಿಶ್ವಾಸ ನಮಗೆ ಕಮ್ಮಿಯಾಗಲಿದೆ. ಆಮೇಲೆ ನಾವು ಏನು ಅಲ್ಲ ಎಂದು ಆಗಿ ಹೋಗುತ್ತೇವೆ.

2. ತಪ್ಪುಗಳ ಬಗ್ಗೆ ಯಾವಾಗಲೂ ಚಿಂತಾಕ್ರಾಂತರಾಗುವುದು! ಮನುಷ್ಯ ಎಂದ ಮೇಲೆ ತಪ್ಪು ಮಾಡುವುದು ಸಹಜ. ಕನ್ನಡದಲ್ಲಿ ಒಂದು ಹಾಡು ಇದೆ, ತಪ್ಪು ಮಾಡೋದು ಸಹಜ ಕಣೋ ತಿದ್ದಿ ನಡೆಯೋನು ಮನುಜ ಕಣೋ. ಇದು ನಿಜ ಕೂಡ ನಾವು ತಪ್ಪು ಮಾಡಿದರೆ ಅದನ್ನು ತಿದ್ದಿಕೊಂಡು ಬಾಳಬೇಕು. ಆದರೆ ನಮ್ಮಲ್ಲಿ ಏನಾಗುತ್ತಿದೆ ಎಂದರೆ ತಪ್ಪು ಮಾಡಿದರೆ ಆ ತಪ್ಪಿನ ಮೇಲೆಯೇ ಜೋತು ಬೀಳೋದು. ಅಯ್ಯೋ ನಾನು ತಪ್ಪು ಮಾಡಿದೆ ಎಂದುಕೊಂಡು ನಮ್ಮನ್ನು ನಾವು ಶಪಿಸೋದು ಅದನ್ನೇ ಪ್ರತಿ ದಿನ ಪ್ರತಿ ಕ್ಷಣ ಯೋಚನೆ ಮಾಡಿಕೊಂಡು ಚಿಂತೆಯಲ್ಲಿ ಮುಳುಗುವುದು. ಇದರಿಂದ ಮಾಡಿದ ತಪ್ಪು ಸರಿಯಾಗೋದಿಲ್ಲ. ಬದಲಾಗಿ, ಮಾಡಬೇಕಾದ ಕೆಲಸವೂ ಹಾಳಾಗಿ ಬಿಡುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಕೆಲಸ ಬಿಟ್ಟು ಬ್ಯುಸಿನೆಸ್ ಮಾಡಲು ಮುಂದಾಗುತ್ತಾನೆ. ಆದರೆ ಆರಂಭದಲ್ಲಿ ಬ್ಯುಸಿನೆಸ್ ಅಷ್ಟೇನೂ ಹಿಟ್ ಆಗುವುದಿಲ್ಲ. ಆದರೆ ಈ ಮನುಷ್ಯ ಆರಂಭದಲ್ಲೇ ಅಯ್ಯೋ ಕೆಲಸ ಬಿಟ್ಟು ತಪ್ಪು ಮಾಡಿದೆ. ಬ್ಯುಸಿನೆಸ್ ಬೇಡವಿತ್ತು ಎಂದು ಯೋಚನೆ ಮಾಡುತ್ತಾರೆ. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗುತ್ತಾರೆ. ಇದರಿಂದ ಎಲ್ಲವೂ ಹಾಳಾಗಿ ಹೋಗುತ್ತದೆ. ಹೀಗಾಗಿ ಯಾವುದೇ ತಪ್ಪು ಮಾಡಿದರೂ ಅದರ ಬಗ್ಗೆ ಯೋಚಿಸಬೇಡಿ. ಮುಂದೆ ಏನು ಆಗಬೇಕು ಅನ್ನೋದನ್ನ ಯೋಚನೆ ಮಾಡಿ.

3. ಯಾವಾಗಲೂ ಕೊರತೆ ಕಾಣುವುದು ಕೊರತೆ ಕಾಣುವುದು ಅಥವಾ ಇಲ್ಲದಿರುವ ಬಗ್ಗೆ ಯಾವತ್ತೂ ಯೋಚಿಸುವುದು. ಇದು ಮನುಷ್ಯನ ಸಹಜ ಗುಣವಾಗಿದೆ. ಹೌದು, ಮನುಷ್ಯ ಹೇಗೆ ಅಂದರೆ ಅವನಲ್ಲಿ ಎಲ್ಲವೂ ಇರುತ್ತದೆ. ಆದರೂ ಕೊರತೆ ಬಗ್ಗೆಯೇ ಯೋಚನೆ ಮಾಡುತ್ತಾನೆ. ಉದಾಹರಣೆಗೆ ನಿಮ್ಮ ವೃತ್ತಿಜೀವನದಲ್ಲಿ ನೀವು ಸರಿಯಾದ ಹಾದಿಯಲ್ಲಿದ್ದೀರಾ. ಚೆನ್ನಾಗಿ ಸಂಪಾದಿಸುತ್ತೀದ್ದೀರಿ. ನಿಮಗೆ ಒಳ್ಳೆಯ ಸ್ನೇಹಿತರು ಇದ್ದಾರೆ. ಆದರೆ ನೀವು ಯಾವಾಗಲೂ ಇಲ್ಲದಿರುವ ಒಂದು ವಿಷಯದ ಮೇಲೆ ಕೇಂದ್ರೀಕೃತರಾಗುತ್ತೀರಿ. ಅದು ನನ್ನ ಬಳಿ ಇಲ್ಲವಲ್ಲ ಎಂದು ನೊಂದುಕೊಳ್ಳುತ್ತೀರಿ. ಇದರಿಂದ ಈಗೀನ ಖುಷಿಯನ್ನು ನೀವು ಕಳೆದುಕೊಳ್ಳುತ್ತಿರುತ್ತೀರಿ. ಇಲ್ಲದಕ್ಕೆ ಮನ ತುಡಿದು ಇರುವ ಖುಷಿಯನ್ನು ಹಾಳು ಮಾಡುವುದಾಗಿದೆ. ಅಲ್ಲದೇ ಎಲ್ಲ ಇದ್ದರೂ ಏನು ಇಲ್ಲ ಎಂದು ಅಶಾಂತಿ ಮನಸ್ಸಿನೊಂದಿಗೆ ಕೆಲವರು ಜೀವಿಸುವುದುಂಟು. ಎಲ್ಲಾ ಇದ್ದರೂ ಏನು ಇಲ್ಲ ಎಂದು ಅಸಂತೋಷದಿಂದ ಇರುವುದುಂಟು. ಅದಕ್ಕೆ ಕನ್ನಡ ಹಾಡಿನಲ್ಲಿ ಹೀಗೆ ಹೇಳಲಾಗಿದೆ, ಇರುವುದನ್ನೆಲ್ಲ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂದು. ಆದರೆ ಯಾವಾಗಲೂ ಇದ್ದಿದ್ದರಲ್ಲಿ ಖುಷಿ ಪಡಿ, ಎಲ್ಲವೂ ಇದೆ ಎಂದು ನಂಬಿ ಜೀವಿಸಿ. ನಮ್ಮನ್ನು ನಾವು ದೂರಿಕೊಂಡು ಇರುವ ಸಂತೋಷವನ್ನು ಹಾಳು ಮಾಡಿಕೊಳ್ಳುವುದು ಬೇಡ.

4. ಯಾವಾಗಲೂ ನೆಗೆಟಿವ್ ಆಗಿ ಮಾತನಾಡುವುದು! ಕೆಲವರಿಗೆ ಒಂದು ಅಭ್ಯಾಸ ಇರುತ್ತದೆ ಏನು ಹೇಳಿದರೂ ನೆಗೆಟಿವ್ ಆಗಿ ಮಾತನಾಡುವುದು. ಉದಾಹರಣೆಗೆ, ನಿನಗೆ ಈ ಕೆಲಸ ಮಾಡಲು ಆಗುತ್ತದೆ ಎಂದು ಯಾರಾದರೂ ಹೇಳಿದರೆ ಆತ ತನ್ನಿಂದ ಇದು ಸಾಧ್ಯವಿಲ್ಲ. ಅಯ್ಯೋ ಇದು ನನಗೆ ಆಗಲ್ಲ ಎನ್ನುವುದು. ಇದು ನಕರಾತ್ಮಕತೆ ಮಾತ್ರ. ಯಾಕೆಂದರೆ, ಈ ರೀತಿಯ್ ನೆಗೆಟಿವ್ ಹೇಳಿಕೆಗಳು ನಮ್ಮ ಮನಸ್ಸಿನ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಮುಂದೊಂದು ದಿನ ನಮಗೆ ಸಣ್ಣ ಕೆಲಸ ಕೂಡ ನಮ್ಮಿಂದ ಆಗೋದಿಲ್ಲ ಎಂಬ ಭಾವನೆ ಬಂದು ಬಿಡುತ್ತದೆ. ಇದರಿಂದ ಈ ಬಗ್ಗೆ ಯೋಚಿಸುವುದು ಒಳ್ಳೆಯವುದು. ಯಾವುದೇ ಕೆಲಸವಾದರೂ ನಾನು ಮಾಡುತ್ತೇನೆ ಎಂದು ಹೇಳಬೇಕು. ತಾನು ಮುಂದೆ ನಿಲ್ಲಬೇಕಿದೆ. ಈ ರೀತಿ ಒಂದಾದ್ರೆ ಇನ್ನೊಂದು ವರ್ಗದ ಜನರು ಇರುತ್ತಾರೆ. ಅವರು ಯಾವಾಗಲೂ ತಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕಿ ನೆಗೆಟಿವ್ ಆಗಿ ಮಾತನಾಡೋದು. ಉದಾಹರಣೆಗೆ ಒಂದು ಕೆಲಸ ಇವರಿಂದ ಆಗುತ್ತೆ ಆದರೆ ಅದು ಆಗದಕ್ಕೆ ನನ್ನ ಬ್ಯಾಡ್ ಲಕ್ ಕಾರಣೆ ಎನ್ನುವುದು. ಆ ರೀತಿ ಹೇಳದೆ ಶ್ರಮಿಸುತ್ತಲೇ ಇರಬೇಕು.

5. ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು! ಸಾಮಾಜಿಕ ಬದುಕಿನಲ್ಲಿ ನಿಮ್ಮನ್ನು ನೀವು ಸದಾಕಾಲ ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತೀರಾ? ಪ್ರತಿಭೆ, ವ್ಯಕ್ತಿತ್ವ ಅಥವಾ ದೈಹಿಕ ಸೌಂದರ್ಯ, ಸದೃಢತೆಗಳ ಕುರಿತು ಹೋಲಿಸಿಕೊಂಡು ಕುಗ್ಗುತ್ತೀರಾ? ಹಾಗಿದ್ದರೆ ಈ ಸ್ವಭಾವಕ್ಕೆ ಈಗಲೇ ಬ್ರೇಕ್ ಹಾಕಿ. ಹೋಲಿಸಿಕೊಳ್ಳುವ ಗುಣ ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಸ್ಪರ್ಧಾತ್ಮಕವಾಗಿರುವುದು ಒಂದು ಸ್ವಲ್ಪ ಮಟ್ಟಿಗೆ ಒಳ್ಳೆಯದು, ಆದರೆ ಇದು ನಿಮ್ಮನ್ನ ಹೋಲಿಸುವ ಮಟ್ಟಕ್ಕೆ ಬೆಳೆಯಬಾರದು. ಇದು ಅಪಾಯಕಾರಿ, ಅಲ್ಲದೇ ಹಾನಿಕಾರಕ ಕೂಡ ಹೌದು. ನೀವು ಬೇರೆಯವರಂತೆ ಏಕೆ ಯಶಸ್ವಿ, ಸುಂದರವಾಗಿಲ್ಲ, ಶ್ರೀಮಂತವಾಗಿಲ್ಲ ಅಥವಾ ಬುದ್ಧಿವಂತರಾಗಿಲ್ಲ ಎಂದು ನಿಮಗೆ ನೀವು ಪ್ರಶ್ನೆ ಹಾಕಿಕೊಳ್ಳಬೇಡಿ. ಇದರಿಂದ ನಿಮ್ಮ ಮನಸ್ಸಿಗೆ ಭಾರೀ ನೋವಾಗುತ್ತದೆ. ಅದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

6.ನಿಮಗೆ ಖುಷಿ ಆಗುವ ಕೆಲಸಗಳನ್ನು ಮಾಡಿ! ನಮ್ಮ ಮನಸ್ಸು, ನಾವು ಖುಷಿಯಾಗಿದ್ದರೆ ನಮ್ಮ ಜೀವನವೇ ಖುಷಿಯಾಗಿರುತ್ತದೆ. ಹೀಗಾಗಿ ಇರುವ ಒಂದು ಜೀವನದಲ್ಲಿ ನಮ್ಮ ಖುಷಿಗಾಗಿ ನಾವು ಏನಾದರೂ ಮಾಡಿಕೊಳ್ಳಬೇಕು. ನಿಮ್ಮನ್ನು ಅಂದವಾಗಿ ಇಡಲು ಸಲೂನ್ ಗೆ ಹೋಗುವುದು, ಸಣ್ಣ ಸಣ್ಣ ಪ್ರವಾಸ ಕೈಗೊಳ್ಳುವುದು. ನಮಗೆ ಬೇಕಾದ ಆಹಾರ ತರಿಸಿ ತಿನ್ನುವುದು. ಇಷ್ಟವಾದ ಸಿನಿಮಾ ನೋಡುವುದು ಹೀಗೆ. ನಮ್ಮನ್ನು ನಾವು ಖುಷಿ ಪಡಿಸಬೇಕು. ನಮ್ಮನ್ನು ನಾವು ನೆಮ್ಮದಿಯಿಂದ ಇಡಬೇಕು. ಇನ್ನು ಇದರಿಂದ ನಮಗೆ ನಮ್ಮ ಮೇಲೆ ಆತ್ಮ ವಿಶ್ವಾಸ ಮೂಡುತ್ತದೆ. ಅಲ್ಲದೇ ಒಳ್ಳೆಯದನ್ನು ಅನುಭವಿಸಲು ನಾವು ಅರ್ಹರು ಎಂದು ನಮಗೆ ಭಾಸವಾಗುತ್ತದೆ. ಈ ರೀತಿ ಕೆಟ್ಟ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದರೆ ಖಂಡಿತವಾಗಿಯೂ ಅದರಿಂದ ಹೊರಬನ್ನಿ. ಯಾಕೆಂದರೆ, ನಿಮ್ಮ ಜೀವನವನ್ನು ಸುಂದರವಾಗಿಸುವ ಹಾಗೂ ಹಾಳು ಮಾಡುವ ಕೀ ನಿಮ್ಮ ಕೈಯಲ್ಲಿದೆ. ಅದನ್ನು ಯಾವ ರೀತಿ ಬಳಕೆ ಮಾಡಬೇಕು ಎನ್ನುವುದನ್ನು ನೀವು ಯೋಚಿಸಬೇಕು. ಅಲ್ಲದೇ ಈ ಮೇಲಿನ ಕೆಟ್ಟ ಅಭ್ಯಾಸಗಳು ನಿಮ್ಮ ಬಳಿ ಇದ್ದರೆ ಜೀವನ ನೆಮ್ಮದಿ, ಖುಷಿಯಿಂದ ಇರೋದಿಲ್ಲ.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries