ತ್ರಿಶೂರ್: ಯುವಕನ ಮೂತ್ರಪಿಂಡ ಕಸಿಗಾಗಿ ಸಚಿವೆ ತಮ್ಮ ಬಂಗಾರದ ಬಳೆಯನ್ನೇ ನೀಡುವ ಮೂಲಕ ನೆರವಾಗಿದ್ದಾರೆ. ಅನಾರೋಗ್ಯದ ಸಮಸ್ಯೆ ಹೇಳಿಕೊಂಡು ಬಂದಿದ್ದ ಯುವಕನಿಗೆ ಸಚಿವೆ ಈ ರೀತಿ ಸಹಾಯಹಸ್ತ ನೀಡಿದ್ದಾರೆ.
ತ್ರಿಶೂರ್: ಯುವಕನ ಮೂತ್ರಪಿಂಡ ಕಸಿಗಾಗಿ ಸಚಿವೆ ತಮ್ಮ ಬಂಗಾರದ ಬಳೆಯನ್ನೇ ನೀಡುವ ಮೂಲಕ ನೆರವಾಗಿದ್ದಾರೆ. ಅನಾರೋಗ್ಯದ ಸಮಸ್ಯೆ ಹೇಳಿಕೊಂಡು ಬಂದಿದ್ದ ಯುವಕನಿಗೆ ಸಚಿವೆ ಈ ರೀತಿ ಸಹಾಯಹಸ್ತ ನೀಡಿದ್ದಾರೆ.
ತ್ರಿಶೂರ್ನಲ್ಲಿ ಮೂತ್ರಪಿಂಡ ಕಸಿಗೆ ಸಂಬಂಧಿಸಿದ ವೈದ್ಯಕೀಯ ನೆರವು ಸಮಿತಿಯ ಸಭೆಯಲ್ಲಿ ಸಚಿವೆ ಬಿಂದು ಅವರು ಭಾಗಿಯಾಗಿದ್ದರು. ಈ ವೇಳೆ ಅಲ್ಲೇ ಇದ್ದ 27 ವರ್ಷದ ವಿವೇಕ್ ಪ್ರಭಾಕರ್ ಎಂಬ ಯುವಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದದ್ದನ್ನು ಕಂಡು ಮರುಗಿದ ಸಚಿವೆ ತಕ್ಷಣವೇ ತಮ್ಮ ಕೈಯಲ್ಲಿದ್ದ ಚಿನ್ನದ ಬಳೆಯನ್ನು ತೆಗೆದುಕೊಟ್ಟಿದ್ದಾರೆ.