ಕುಂಬಳೆ: ಮಕ್ಕಳ ವಿವಿಧ ಕಲಾ-ಕ್ರೀಡಾ-ಸಾಹಿತ್ಯಿಕ ಚಟುವಟಿಕೆಗಳನ್ನು ಬೆಳೆಸಲು ಮತ್ತು ವಿದ್ಯಾರ್ಥಿಗಳ ಸೃಜನಾತ್ಮಕತೆಯನ್ನು ವೃದ್ಧಿಸಲು ಸಾಹಿತ್ಯ, ಸಮಾಜವಿಜ್ಞಾನ ,ಗಣಿತ, ವಿಜ್ಞಾನ,ಕ್ರೀಡಾ, ಪರಿಸರ ಇತ್ಯಾದಿ ಶಾಲಾ ಕ್ಲಬ್ ಗಳು ಅವಶ್ಯಕ ಎಂದು ಶ್ರೀ ಕೃಷ್ಣ ವಿದ್ಯಾಲಯ ಶೇಡಿಕಾವು ಮುಖ್ಯೋಪಾದ್ಯಾನಿ ಸುನೀತ ಹೇಳಿದರು.
ಶಾಲೆಯ ವಿವಿಧ ಕ್ಲಬ್ ಗಳನ್ನು ಉಧ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲು ಶಾಲಾ ಕ್ಲಬ್ ಚಟುವಟಿಕೆಗಳು ಸಹಕಾರಿ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಇದು ಪೂರಕ ಎಂದು ಅವರು ಹೇಳಿದರು.
ಶಾಲಾ ವಿದ್ಯಾರ್ಥಿನಿ ಕು.ಚೈತನ್ಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಅಧ್ಯಾಪಿಕೆಯರಾದ ತಿ ಜಯಶ್ರೀ ಎಸ್ , ತಿ ಶ್ವೇತಾ ಉಪಸ್ಥಿತರಿದ್ದರು. ಶಾಲಾ ಕಿರಿಯ ವಿದ್ಯಾರ್ಥಿನಿ ಕು. ಪೂಜಿತ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಾಚನ ಸಪ್ತ್ತಾಹದ ಅಂಗವಾಗಿ ಶಿಕ್ಷಕಿ ತೇಜಸ್ವಿನಿ ಕೆ ಅವರು ಸ್ವರಚಿತ 'ಮನದ ಹೂವು' ಕವನ ಸಂಕಲನವನ್ನು ಶಾಲಾ ಗ್ರಂಥಾಲಯಕ್ಕೆ ಕೊಡುಗೆ ನೀಡಿದರು.
ವಿದ್ಯಾರ್ಥಿನಿ ಕು.ನಮಿಷ ಸ್ವಾಗತಿಸಿ,ಕು. ತನ್ವಿ ವಂದಿಸಿದರು. ಶಾಲಾ ನಾಯಕ ಶಮಂತ್ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ವಿದ್ಯಾರ್ಥಿಗಳಿಂದ ಸಾಹಿತ್ಯಿಕ, ಯೋಗ ಕಾರ್ಯಕ್ರಮ ನಡೆಯಿತು.