ಕೋಝಿಕ್ಕೋಡ್: ಸಹಪಾಠಿಗಳಿಗೆ ಸಂದೇಶ ರವಾನಿಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಣಿಯೂರು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ನೈಸಾ (19) ಆತ್ಮಹತ್ಯೆಗೈದವಳು.
ಸಂದೇಶ ಪಡೆದು ಸ್ನೇಹಿತರು ಮನೆಗೆ ಬರುವಷ್ಟರಲ್ಲಿ ನೈಸಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ.
ಕಾಲೇಜಿನಲ್ಲಿ ಓದುತ್ತಿದ್ದ ನೈಸಾ ತನಗೆ ಹುಷಾರಿಲ್ಲ ಎಂದು ಮನೆಗೆ ಬಂದು ಸಹಪಾಠಿಗಳಿಗೆ ಸಂದೇಶ ಕಳುಹಿಸುತ್ತಿದ್ದಳು. ಆತ್ಮಹತ್ಯೆಗೈಯ್ಯುವ ವೇಳೆ ಮನೆಯಲ್ಲಿ ಯಾರೂ ಇದ್ದಿರಲಿಲ್ಲ. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ.