ಕೊಚ್ಚಿ: ದೇಶದೊಳಗೆ ರಾಷ್ಟ್ರವಿರೋಧಿ ಚಟುವಟಿಕೆ ಹರಡುವ ಸಂಘಟನೆಗಳನ್ನು ಬಂದೂಕಿನಿಂದ ಎದುರಿಸಬೇಕು ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹೇಳಿದ್ದಾರೆ.
ಸ್ವತಂತ್ರ ಅಧಿಕಾರವನ್ನು ಬೇಡುವ ಸಶಸ್ತ್ರ ಜನರೊಂದಿಗೆ ಮಾತುಕತೆ ಅಗತ್ಯವಿಲ್ಲ, ಅವರನ್ನು ಬಂದೂಕುಗಳೊಂದಿಗೆ ಭೇಟೆಯಾಡÀಬೇಕು. ಆಯುಧಗಳನ್ನು ತ್ಯಜಿಸುವವರ ಜೊತೆ ಮಾತ್ರ ಚರ್ಚೆಯಾಗಬೇಕು ಎಂದರು.
ಈಶಾನ್ಯ ರಾಜ್ಯಗಳು ಸೇರಿದಂತೆ ಪ್ರಕ್ಷುಬ್ಧ ಪ್ರದೇಶಗಳು ಮೊದಲಿಗಿಂತ ಶಾಂತವಾಗಿವೆ ಎಂದು ಅವರು ತಿಳಿಸಿದರು. ಸೇನೆಯ ಮಧ್ಯಪ್ರವೇಶದಿಂದ ಈ ಪ್ರದೇಶ ಶಾಂತವಾಯಿತು ಎಂದರು. ದೇಶದ ವಿರುದ್ಧ ಅಸ್ತ್ರ ಹಿಡಿದವರನ್ನು ಅಸ್ತ್ರದಿಂದ ಎದುರಿಸಬೇಕು ಎಂದು ಸ್ಪಷ್ಟಪಡಿಸಿದರು.
ಧರ್ಮವು ಸಂವಿಧಾನಕ್ಕಿಂತ ಮೇಲಿದೆ ಎಂದು ಹೇಳುವವರನ್ನು ಒಪ್ಪಲು ಸಾಧ್ಯವಿಲ್ಲ ಎಂದು ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಹೇಳಿದ್ದಾರೆ. ಧಾರ್ಮಿಕ ನಂಬಿಕೆಗಳನ್ನು ಉಳಿಸಿಕೊಂಡರೆ ಮಾತ್ರ ದೇಶದಲ್ಲಿ ಬದುಕಬಹುದು ಎಂಬ ನಿಲುವು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು. ಸಮಕಾಲೀನ ಭಾರತ ಎದುರಿಸುತ್ತಿರುವ ಆಂತರಿಕ ಭದ್ರತಾ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು.
ದೇಶದ ವಿರುದ್ಧ ಕೆಲಸ ಮಾಡುತ್ತಿರುವ ಶಸ್ತ್ರಧಾರಿಗಳೊಂದಿಗೆ ಮಾತುಕತೆ ಅಗತ್ಯವಿಲ್ಲ; ಬಂದೂಕು ಹಿಡಿದು ಎದುರಿಸಬೇಕು: ತಮಿಳುನಾಡು ರಾಜ್ಯಪಾಲ
0
ಜುಲೈ 31, 2022
Tags