ಕಾಸರಗೋಡು: ಕೇಂದ್ರ ಅರಣ್ಯ-ಪರಿಸರ ಸಚಿವಾಲಯ ಮತ್ತು ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಜಂಟಿಯಾಗಿ ಕಾಸರಗೋಡು ಪಲ್ಲಂ ಕಾಂಡ್ಲಾ ನೆಡುತೋಪು ಪ್ರದೇಶದಲ್ಲಿ ನಗರ ಅರಣ್ಯ ಯೋಜನೆಯ ಅಂಗವಾಗಿ ಕಾಂಡ್ಲಾ ಸಸಿಗಳನ್ನು ನೆಡುವ ಮೂಲಕ 'ಹರಿಯಾಲಿ ಮಹೋತ್ಸವ ಆಚರಿಸಲಾಯಿತು.
ಭೂಮಿಗೆ ಹಸಿರು ಹೊದಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಸ್ಮರಣಾರ್ಥ ಎಪ್ಪತ್ತೈದು ಕಾಂಡ್ಲಾ ಸಸಿಗಳನ್ನು ನೆಡುವ ಮೂಲಕ ಹಬ್ಬ ಪ್ರಾರಂಭವಾಯಿತು. ಹರಿಯಲಿ ಮಹೋತ್ಸವಕ್ಕೆ ದೇಶದ 200 ಸ್ಥಳಗಳನ್ನು ಆಯ್ಕೆ ಮಾಡಿದಾಗ ಕಾಸರಗೋಡು ಪಳ್ಳಂ ಪ್ರದೇಶವೂ ಸೇರಿತ್ತು.
ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಭೂಪೇಂದ್ರ ಯಾದವ್ ಅವರು ಆನ್‍ಲೈನ್ ಮೂಲಕ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಘೋಷಿಸಿದರು. ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ ಪಿ.ಬಿಜು ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಧನೇಶ್ ಕುಮಾರ್ ನಗರ ಅರಣ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದರು. ವಲಯ ಅರಣ್ಯಾಧಿಕಾರಿಗಳಾದ ಸೊಲೊಮನ್ ಥಾಮಸ್ ಟಿ. ಜಾರ್ಜ್, ವಿ. ರತೀಶನ್, ಕೆ. ಅಶ್ರಫ್, ಸಿ.ಎಚ್.ರಮೇಶ, ಅರಣ್ಯ ಸಂರಕ್ಷಣಾ ಸಮಿತಿ ಕಾರ್ಯಕರ್ತರು, ಪಿ.ಶಶಿಧರನ್ ನಾಯರ್, ಕಾಸರಗೋಡು ಸರ್ಕಾರಿ ಕಾಲೇಜು ಎನ್‍ಎಸ್‍ಎಸ್ ಕಾರ್ಯದರ್ಶಿ ಎ.ವೈಶಾಖ್ ಉಪಸ್ಥಿತರಿದ್ದರು. ಪಲ್ಲಂ ನದಿಯ ದಡದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು ಎನ್ನೆಸ್ಸೆಸ್ ವಿದ್ಯಾರ್ಥಿಗಳು, ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳು, ಪೆÇಲೀಸ್ ಸಿಬ್ಬಂದಿ, ಸ್ಥಳೀಯರು ಹಾಗೂ ಅಧಿಕಾರಿಗಳು ಕಾಂಡ್ಲಾ ಸಸಿಗಳನ್ನು ನೆಟ್ಟರು.