ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಬುಲೆಟ್ ಟ್ರೈನ್ ಯೋಜನೆ ಮುಖ್ಯಸ್ಥ ಎಂಡಿ ‘ಸತೀಶ್ ಅಗ್ನಿಹೋತ್ರಿ ಅವರನ್ನು ವಜಾಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಒಂದು ವರ್ಷದ ಹಿಂದೆ ವಿಶೇಷ ಪ್ರಕರಣ ಮತ್ತು ಔಟ್-ಆಫ್-ಟರ್ನ್ ಆಧಾರದ ಮೇಲೆ ಹುದ್ದೆಗೆ ನೇಮಕಗೊಂಡಿದ್ದ ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಓಊSಖಅಐ) ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅಗ್ನಿಹೋತ್ರಿ ಅವರನ್ನು ಕೇಂದ್ರ ಸರ್ಕಾರ ಗುರುವಾರ ವಜಾಗೊಳಿಸಿದೆ.
“ಸತೀಶ್ ಅಗ್ನಿಹೋತ್ರಿ ಅವರ ಹುದ್ದೆಯನ್ನು ರದ್ದುಗೊಳಿಸಲು ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿದ್ದು, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡುವಂತೆ ನಿರ್ದೇಶಿಸಲಾಗಿದೆ” ಎಂದು ಓಊSಖಅಐ ಕಂಪನಿ ಕಾರ್ಯದರ್ಶಿಗೆ ಜುಲೈ 7ರಂದು ರೈಲ್ವೆ ಮಂಡಳಿ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಓಊSಖಅಐನಲ್ಲಿ ನಿರ್ದೇಶಕರಾಗಿ (ಯೋಜನೆಗಳು) ಅಧಿಕಾರದಲ್ಲಿರುವ ರಾಜೇಂದ್ರ ಪ್ರಸಾದ್ ಅವರಿಗೆ “ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮೂರು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ – ಯಾವುದು ಮೊದಲೋ ಅದು) ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳಲು ನಿರ್ದೇಶಿಸಲಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಗ್ನಿಹೋತ್ರಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ, 1988 ರ ಅಡಿಯಲ್ಲಿ ಯಾವುದೇ ಅಪರಾಧವನ್ನು ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮತ್ತು ಆರು ತಿಂಗಳೊಳಗೆ ಅಥವಾ ಡಿಸೆಂಬರ್ 12, 2022 ರೊಳಗೆ ತನಿಖಾ ವರದಿಯನ್ನು ಲೋಕಪಾಲ್ ಕಚೇರಿಗೆ ಸಲ್ಲಿಸುವಂತೆ ಲೋಕಪಾಲ್ ನ್ಯಾಯಾಲಯವು ಸಿಬಿಐಗೆ ನಿರ್ದೇಶನ ನೀಡಿದೆ.