ನವದೆಹಲಿ: ಖಾಸಗಿ ಬಳಕೆಗಾಗಿ ಕ್ಯಾಪ್ಟಿವ್ ಸ್ಪೆಕ್ಟ್ರಂ ಹಂಚಿಕೆ ನೀತಿಯನ್ನು ಅಂತಿಮಗೊಳಿಸದ ದೂರಸಂಪರ್ಕ ಇಲಾಖೆ ಹಾಗೂ ಖಾಸಗಿ ಬಳಕೆದಾರರಿಗೆ ಸ್ಪೆಕ್ಟ್ರಂ ಬೆಲೆಯನ್ನು ಪರಿಶೀಲಿಸದ ಕಾರಣಕ್ಕೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ದೂರಸಂಪರ್ಕ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.
'ಸರ್ಕಾರಿ ಇಲಾಖೆಗಳು ಮತ್ತು ಏಜೆನ್ಸಿಗಳಿಗೆ ಆಡಳಿತಾತ್ಮಕ ಆಧಾರದ ಮೇಲೆ ಸ್ಪೆಕ್ಟ್ರಮ್ ಹಂಚಿಕೆ' ಕುರಿತು ಸಿಎಜಿ ಬಿಡುಗಡೆ ಮಾಡಿದ ವರದಿಯಲ್ಲಿ, ಕ್ಯಾಪ್ಟಿವ್ ಬಳಕೆದಾರರಿಗೆ ಸ್ಪೆಕ್ಟ್ರಮ್ ಬೆಲೆ ಕಾರ್ಯವಿಧಾನವನ್ನು ಪರಿಶೀಲಿಸಲು ಡಾಟ್ ಅನ್ನು ಕೇಳಿದೆ. ವಾಣಿಜ್ಯೇತರ ಬಳಕೆಗಾಗಿ ಸರ್ಕಾರಿ ಇಲಾಖೆಗಳು, ಸಚಿವಾಲಯಗಳು, ಏಜೆನ್ಸಿಗಳಿಗೆ ಸ್ಪೆಕ್ಟ್ರಮ್ ಅನ್ನು ಹಂಚಲಾಯಿತು.
ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಈ ವರದಿಯಲ್ಲಿ, ವಿವಿಧ ಸ್ಪೆಕ್ಟ್ರಂ ಬ್ಯಾಂಡ್‌ಗಳ ಬಳಕೆ ಮತ್ತು ಗುಣಲಕ್ಷಣಗಳನ್ನು ಅವಲಂಬಿಸಿ ದೂರಸಂಪರ್ಕ ಇಲಾಖೆಯು ವಿಭಿನ್ನ ಬೆಲೆಗಳನ್ನು ನಿಗದಿಪಡಿಸಲು ಪರಿಗಣಿಸಬಹುದು ಎಂದು ಸಿಎಜಿ ಹೇಳಿದೆ.
2021ರ ಜುಲೈನಲ್ಲಿ ಕ್ಯಾಪ್ಟಿವ್ ಬಳಕೆದಾರರಿಗೆ ಸ್ಪೆಕ್ಟ್ರಮ್ ಹಂಚಿಕೆ ವಿಧಾನದ ಬಗ್ಗೆ ಕಾನೂನು ಅಭಿಪ್ರಾಯವನ್ನು ತೆಗೆದುಕೊಂಡರೂ, ಖಾಸಗಿ ಬಳಕೆಗಾಗಿ ಸ್ಪೆಕ್ಟ್ರಮ್ ಹಂಚಿಕೆಗೆ ಸಂಬಂಧಿಸಿದಂತೆ ಆoಖಿ ತನ್ನ ನೀತಿಯನ್ನು ಅಂತಿಮಗೊಳಿಸಲಿಲ್ಲ ಎಂದು ಸಿಎಜಿ ವರದಿ ಹೇಳಿದೆ. ಡಿಜಿಟಲ್ ಕಮ್ಯುನಿಕೇಷನ್ಸ್ ಕಮಿಷನ್(ಡಿಸಿಸಿ) ಅಪೆಕ್ಸ್ ಟೆಲಿಕಾಂ ನೀತಿ ಮಾಡುವ ಸಂಸ್ಥೆಯಾಗಿದೆ.
ವರದಿಯ ಪ್ರಕಾರ, ಕ್ಯಾಪ್ಟಿವ್ ಬಳಕೆದಾರರಿಗೆ ಆಡಳಿತಾತ್ಮಕವಾಗಿ ಸ್ಪೆಕ್ಟ್ರಮ್ ಹಂಚಿಕೆಗಾಗಿ 2012ರಿಂದ ಬೆಲೆ ಸೂತ್ರವನ್ನು ಆoಖಿ ಪರಿಶೀಲಿಸಿಲ್ಲ.
ಸ್ಪೆಕ್ಟ್ರಮ್ ಯೋಜನೆ, ಲಭ್ಯತೆ, ಹಂಚಿಕೆ ಮತ್ತು ಬೆಲೆಗಳ ಆವರ್ತಕ ಪರಿಶೀಲನೆಗಾಗಿ ಎಲ್ಲಾ ಮಧ್ಯಸ್ಥಗಾರರನ್ನು ಒಳಗೊಂಡಿರುವ ಶಾಶ್ವತ ಕಾರ್ಯವಿಧಾನವನ್ನು ಡಿಒಟಿ ಜಾರಿಗೆ ತರಬೇಕು ಎಂದು ಸಿಎಜಿ ಶಿಫಾರಸು ಮಾಡಿದೆ. ಇದು ದೇಶದಲ್ಲಿ ಸ್ಪೆಕ್ಟ್ರಮ್‌ನ ಸಮರ್ಥ ನಿರ್ವಹಣೆ ಮತ್ತು ಅತ್ಯುತ್ತಮ ಬಳಕೆಗಾಗಿ ನಿರ್ಧಾರಗಳನ್ನು ತ್ವರಿತಗೊಳಿಸುತ್ತದೆ.