ಕಾಸರಗೋಡು: ಸರ್ಕಾರಿ ನೌಕರರಿಗಾಗಿ ಜುಲೈ 1ರಿಂದ ಜಾರಿಗೊಳಿಸಿರುವ ಮೆಡಿ ಸೆಪ್ ಯೋಜನೆಯಲ್ಲಿ ಸgರ್ಕಾರದ ಪಾಲು ಸೇರಿಸಿ ಯೋಜನೆ ಪರಿಷ್ಕರಣೆ ಮಾಡಬೇಕು ಎಂದು ರಾಷ್ಟ್ರೀಯ ಶಿಕ್ಷಕರ ಪರಿಷತ್(ಎನ್‍ಟಿಯು) ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ ಆಗ್ರಹಿಸಿದ್ದಾರೆ.
ಅವರು ವಿವಿಧ ಬೇಡಿಕೆ ಮುಂದಿರಿಸಿ ಡಿಡಿಇ ಕಛೇರಿ ಎದುರು ರಾಷ್ಟ್ರೀಯ ಶಿಕ್ಷಕರ ಪರಿಷತ್ ರಾಜ್ಯಾದ್ಯಂತ ನಡೆಸುತ್ತಿರುವ ಮುಷ್ಕರದ ಅಂಗವಾಗಿ ಕಾಸರಗೋಡಿನಲ್ಲಿ ನಡೆದ ಧರಣಿ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು
ಸಹಭಾಗಿತ್ವದ ಪಿಂಚಣಿ ವ್ಯವಸ್ಥೆ ಹಿಂಪಡೆಯಬೇಕು, ಡಿಎ ಬಾಕಿ ಭತ್ಯೆ ಮಂಜೂರುಗೊಳಿಸಬೇಕು, ಸರಂಡರ್ ವ್ಯವಸ್ಥೆ ಮರುಸ್ಥಾಪಿಸಬೇಕು, ಎಲ್‍ಪಿ ಮಟ್ಟದಲ್ಲಿ ಸಂಸ್ಕøತ ಶಿಕ್ಷಕರ ಹುದ್ದೆ ಮಂಜೂರುಗೊಳಿಸಬೇಕು, ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಅವಕಾಶ ಮತ್ತು ಸೂಕ್ತ ರಕ್ಷಣೆಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಆಐಓಜಿಸಲಾಗಿತ್ತು. ಸಂಘಟನೆ ಜಿಲ್ಲಾ ಅಧ್ಯಕ್ಷ ರಂಜಿತ್ ಎಂ, ಕಾಸರಗೋಡು ನಗರಸಭಾ ಬಿಜೆಪಿ ಕೌನ್ಸಿಲರ್ ಕೆ.ಸವಿತಾ ಟೀಚರ್, ರಾಜ್ಯ ಕಾರ್ಯದರ್ಶಿ ಕೆ.ಪ್ರಭಾಕರ ನಾಯರ್, ಎನ್.ಜಿ.ಒ ಸಂಘದ ಜಿಲ್ಲಾಧ್ಯಕ್ಷ ವಿಜಯನ್ ಸಿ, ಫೆಟೋ ಜಿಲ್ಲಾ ಕಾರ್ಯದರ್ಶಿ ಎಂ.ಗಂಗಾಧರ, ಜಿಲ್ಲಾ ಸಮಿತಿ ಸದಸ್ಯ ಕೆ.ಸುರೇಖಾ, ಟಿ.ಕೃಷ್ಣನ್, ಅರವಿಂದಾಕ್ಷ ಭಂಡಾರಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಅಜಿತ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಮಹಾಬಲ ಭಟ್ ವಂದಿಸಿದರು.