ತಿರುವನಂತಪುರ: ತಿರುವನಂತಪುರಂನಲ್ಲಿರುವ ಸಂದೀಪಾನಂದ ಗಿರಿ ಅವರ ಹೋಂಸ್ಟೇ ಸುಟ್ಟ ಪ್ರಕರಣವನ್ನು ಸಾಕ್ಷ್ಯಗಳಿಲ್ಲದ ಕಾರಣ ಪರಕರಣದ ತನಿಖೆ ಕೊನೆಗೊಳಿಸಲಾಗಿದೆ. ಮೂರೂವರೆ ವರ್ಷಗಳಿಂದ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದು ಬಿಟ್ಟರೆ ತನಿಖಾ ತಂಡಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಇನ್ನೂ ಕೆಲವು ವಿಷಯಗಳನ್ನು ಪರಿಶೀಲಿಸಿದ ನಂತರ, ಕ್ರೈಂ ಬ್ರಾಂಚ್ ತನಿಖೆಯನ್ನು ಮುಕ್ತಾಯಗೊಳಿಸಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲು ನಿರ್ಧರಿಸಿತು. ಮೊದಲ ಹಂತದಲ್ಲಿ ತನಿಖೆ ದಿಕ್ಕು ತಪ್ಪಿದೆ ಎಂದು ಅಪರಾಧ ವಿಭಾಗವೂ ಅಂದಾಜಿಸಿದೆ.
ಇದೇ ವೇಳೆ ಸಂದೀಪಾನಂದಗಿರಿ ಅವರು ಪೋಲೀಸರು ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದರು. ಕೆಲವು ಅಧಿಕಾರಿಗಳು ಪ್ರಕರಣವನ್ನು ತನ್ನ ವಿರುದ್ಧವೇ ತಿರುಗಿಸಲು ಪ್ರಯತ್ನಿಸಿದರು. ತನಿಖೆಯನ್ನು ಸ್ಥಗಿತಗೊಳಿಸುತ್ತಿರುವುದು ವಿಷಾದನೀಯ ಎಂದು ಸಂದೀಪಾನಂದ ಗಿರಿ ಹೇಳಿರುವರು. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಕೂಡ ಪ್ರಕರಣದ ತನಿಖೆಯನ್ನು ಅಂತ್ಯಗೊಳಿಸುವ ಕ್ರಮವನ್ನು ಟೀಕಿಸಿದ್ದಾರೆ. 'ತತ್ವಮಸಿ.. ಇದು ನೀನೇ' ಎಂಬ ಶೀರ್ಷಿಕೆಯೊಂದಿಗೆ ಸಂದೀಪಾನಂದಗಿರಿ ಅವರ ಚಿತ್ರವನ್ನೂ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಅಕ್ಟೋಬರ್ 27, 2018 ರಂದು ನಡೆದಿದ್ದಾಗಿದೆ. ಹೋಂ ಸ್ಟೇಯಲ್ಲಿ ಅಗ್ನಿ ಅವಘಡ ನಡೆದ ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಸಿಪಿಎಂ ಮುಖಂಡರು ಸ್ಥಳಕ್ಕೆ ಧಾವಿಸಿದ್ದರು. ದಾಳಿಯ ಹಿಂದೆ ಆರ್ ಎಸ್ ಎಸ್ ಕೈವಾಡವಿದ್ದು, ಆದಷ್ಟು ಬೇಗ ಆರೋಪಿಗಳನ್ನು ಹಿಡಿಯಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ ಹೋಂಸ್ಟೇಯ ಸಿಸಿಟಿವಿ ಕಾರ್ಯನಿರ್ವಹಿಸದೇ ಇರುವುದು ಸೇರಿದಂತೆ ಅನುಮಾನಾಸ್ಪದವಾಗಿರುವುದು ಕಂಡುಬಂದಿದೆ. ಘಟನೆಯ ಹಿಂದೆ ಸಿಪಿಎಂ ಪಿತೂರಿ ಇದೆ ಎಂಬ ಆರೋಪವೂ ಬಲವಾಗಿದೆ.