ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದ್ವಿತೀಯ ಚಾತುರ್ಮಾಸ್ಯದ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಪಿ.ಕಾಳಿಂಗರಾವ್ ಸ್ಮೃತಿ ಮೆಲೋಡೀಸ್ (ರಿ) ಬಾರ್ಕೂರು ತಂಡದವರಿಂದ ಭಕ್ತಿರಸಮಂಜರಿ ಕಾರ್ಯಕ್ರಮ ಜರಗಿತು. ಪ್ರಸಿದ್ಧ ಗಾಯಕ ರಾಜೇಶ್ ಶ್ಯಾನುಭೋಗ್ ನೇತೃತ್ವದಲ್ಲಿ ದಯಾನಂದ ವಾರಂಬಳ್ಳಿ ಬ್ರಹ್ಮಾವರ, ಅಮ್ಮು ಮಾಸ್ಟರ್ ಕಾಸರಗೋಡು, ಉದಯ ಕುಮಾರ್ ಉಡುಪಿ, ಗ್ರೀಷ್ಮಾ ಕಟೀಲ್ ಹಾಗೂ ಸ್ಥಳೀಯ ಪ್ರತಿಭೆಗಳಾದ ದೀಪಶ್ರೀ ಎಡನೀರು, ದಿವ್ಯಶ್ರೀ ಎಡನೀರು ತಮ್ಮ ಹಾಡಿನ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲರಾದರು. ಶ್ರೀಗಳು ಸಂಪೂರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಾದ, ಮಂತ್ರಾಕ್ಷತೆಯನ್ನು ನೀಡಿದರು. ಜಯಪ್ರಕಾಶ್ ಕೆ ಎಡನೀರು, ಅರವಿಂದ ಚೀಂತಾಣಿ ಪೈಕ, ಅನಿಲ್ ಐಲುಕುಂಜೆ ಎಡನೀರು, ರವಿ ಕೆಮ್ಮಂಗಯ, ಎಡನೀರು ಸುಂದರ ಪ್ರಾಯೋಜಕರಾಗಿ ಸಹಕರಿಸಿದ್ದರು.
ಪಿ.ಕಾಳಿಂಗರಾವ್ ಸ್ಮೃತಿ ಮೆಲೋಡೀಸ್ ತಂಡದಿಂದ ಎಡನೀರಿನಲ್ಲಿ ಭಕ್ತಿರಸಮಂಜರಿ
0
ಜುಲೈ 25, 2022