ಸಮರಸ ಚಿತ್ರಸುದ್ದಿ: ಬದಿಯಡ್ಕ: ಗ್ರಾಮ ಪಂಚಾಯತಿಯ 14ನೆ ವಾರ್ಡ ಪಟ್ಟಾಜೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಸ್ಪರ್ಧಾಕಣದಲ್ಲಿರುವ ಯುಡಿಎಫ್ ಅಭ್ಯರ್ಥಿ ಶ್ಯಾಮ ಪ್ರಸಾದ್ ಮಾನ್ಯ ಅವರು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಆಶೀರ್ವಾದ, ಅನುಗ್ರಹ ಪಡೆದು ಚುನಾವಣಾ ಪ್ರಚಾರ ಆರಂಭಿಸಿದರು. ಕಾಂಗ್ರೆಸ್ ಹಿರಿಯ ನೇತಾರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ,ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಎಂ ನಾರಾಯಣ, ಹಿರಿಯ ನೇತಾರ ತಿರುಪತಿ ಕುಮಾರ್ ಭಟ್, ಗಂಗಾಧರ ಗೋಳಿಯಡ್ಕ, ಯುವ ಕಾಂಗ್ರೆಸ್ ನೇತಾರರಾದ ಕೃಷ್ಣ ಕುಮಾರ್, ಶ್ರೀನಾಥ ಜೊತೆಗಿದ್ದರು.