ಕುಂಬಳೆ: ಗ್ರಾಮೀಣ ಗ್ರಾ.ಪಂ.ಗಲಲ್ಲಿ ಒಂದಾದ ಪುತ್ತಿಗೆಯ ಸೌತೆಕಾಯಿ ಕೃಷಿಕರಿಗೆ ಸಮಧಾನಕರ ಒಂದಂಶವನ್ನು ಅಲ್ಲಿಯ ಕೃಷಿ ಅಧಿಕಾರಿಗಳು ಪರಿಚಯಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ಕೃಷಿ ಅಧಿಕಾರಿ ಬಿ.ಎಚ್.ನಫೀಸತ್ ಹಂಶೀನ ಅವರ ಕಲ್ಪನೆಯಲ್ಲಿ ಸೌತೆಕಾಯಿ ಸಾಬೂನು ಪುತ್ತಿಗೆ ಪಂಚಾಯಿತಿಯ ಸೌತೆಕಾಯಿ ರೈತರಿಗೆ ಒಲವು ಮೂಡಿಸುವಲ್ಲಿ ಸಫಲತೆಯತ್ತ ಸಾಗಿದೆ. ಮುಹಿಮ್ಮತ್ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ಹನೀಫಾ ಹಿಮ್ಜಾಕ್ ಅವರು ಮೊದಲು ಸೋಪ್ ತಯಾರಿಸಿದರು. ಪಂಚಾಯತಿಯಲ್ಲಿ ರೈತರಿಂದ ಸಂಗ್ರಹಿಸಿದ ಸೌತೆಕಾಯಿಯನ್ನು ಶುದ್ಧ ತೆಂಗಿನ ಎಣ್ಣೆ ಬಳಸಿ ತಯಾರಿಸಿದ ಸೌತೆಕಾಯಿ ಸಾಬೂನು ಕುಕುಮಿಸ್ (ರೌರೌಷರ್ವ) ಎಂದು ಹೆಸರಿಸಲಾಗಿದೆ.
ಪುತ್ತಿಗೆ ಪಂಚಾಯತಿ ವ್ಯಾಪ್ತಿಯ ಸುಮಾರು ಐದು ಹೆಕ್ಟೇರ್ ಪ್ರದೇಶದಲ್ಲಿ ಸೌತೆಕಾಯಿ ಬೆಳೆಯುವ ಪಂಚಾಯಿತಿಯಾಗಿದೆ. ಸೌತೆಕಾಯಿಯಿಂದ ಮೌಲ್ಯವರ್ಧಿತ ಉತ್ಪನ್ನಗಳ ಹೊರಹೊಮ್ಮುವಿಕೆಯಿಂದ ರೈತರಿಗೆ ಈ ಹೊಸ ಉತ್ಪನ್ನ ಸ್ವಲ್ಪ ಸಮಾಧಾನವಾಗುವ ನಿರೀಕ್ಷೆಯಿದೆ.
ಪಪ್ಪಾಯಿ ಸೋಪು ಮುಂದಿನ ಗುರಿಯಾಗಿದೆ. ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯ ಪಪ್ಪಾಯಿ ರೈತರಿಂದ ಮಾಗಿದ ಪಪ್ಪಾಯಿಯನ್ನು ಸಂಗ್ರಹಿಸಿ ಸೌತೆಕಾಯಿ ಸೋಪಿನಂತೆಯೇ ಪಪ್ಪಾಯಿ ಸೋಪ್ ಪರಿಕಲ್ಪನೆಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದೆಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.
ಸರ್ಕಾರದ "ನನ್ನ ಕೇರಳÀ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ"ದಲ್ಲಿ ಈ ಸೌತೆ ಸಾಬೂನು ಬಹುಜನರಿಂದ ಪ್ರಶಂಸನೆಗೊಳಗಾಗಿತ್ತು. ಕೃಷಿ ಭವನದಲ್ಲಿ ಹಾಗೂ ಶಿಕ್ಷಕರಿಗೆ ವೈಯಕ್ತಿಕವಾಗಿ ಹಲವಾರು ಮಂದಿ ಸಾಬೂನಿಗೆ ಬೇಡಿಕೆ ನೀಡುತ್ತಿದ್ದಾರೆ. ಗ್ರಾಹಕರು ಸೌತೆಕಾಯಿ ಸೋಪ್ ಅನ್ನು ಒಮ್ಮೆ ಬಳಸಿದ ಬಳಿಕ ಮತ್ತೆ ಅದೇ ಸಾಬೂನಿಗಾಗಿ ಬೇಡಿಕೆ ಇರಿಸುತ್ತಿರುವುದು ಇಲ್ಲಿ ಗಮನಾರ್ಹ. ಹೆಚ್ಚಿನ ಕುಟುಂಬಶ್ರೀ ಕಾರ್ಯಕರ್ತರು ಸಾಬೂನು ತಯಾರಿಕೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಕೃಷಿ ಅಧಿಕಾರಿ ಬಿ.ಎಚ್.ನಫೀಸತ್ ಹಂಶೀನ ಮಾತನಾಡಿ, ಪುತ್ತಿಗೆ ಪಂಚಾಯಿತಿ ಹಾಗೂ ಕೃಷಿ ಭವನವು ಸೌತೆಕಾಯಿ ಸಾಬೂನು ತಯಾರಿಕೆಯಲ್ಲಿ ಕುಟುಂಬಶ್ರೀ ಕಾರ್ಯಕರ್ತರಿಗೆ ತರಬೇತಿ ನೀಡುವ ಮೂಲಕ ರೈತರಿಗೆ ಉತ್ತಮ ಆದಾಯ ಕಲ್ಪಿಸುವ ಕೆಲಸ ಮಾಡುತ್ತಿದೆ ಎಂದಿರುವರು.