ಜೈಪುರ: 'ಆಜಾದಿ ಕಾ ಅಮೃತಮಹೋತ್ಸವ'ದ ಹೆಸರಿನಲ್ಲಿ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ಅದೇ ವೇಳೆ ರಾಷ್ಟ್ರಕ್ಕೆ ವಿಷವುಣಿಸುವ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯದ ಇತಿಹಾಸವನ್ನು ನಾಶಮಾಡುತ್ತಿದೆ ಎಂದು ರಾಜಸ್ಥಾನದ ಸಿಪಿಐ (ಎಂ) ಮುಖ್ಯಸ್ಥೆ ಬೃಂದಾ ಕಾರಟ್ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೃಂದಾ ಕಾರಟ್, ಹಿಂದೂ ರಾಷ್ಟ್ರೀಯತೆ ಹೆಸರಲ್ಲಿ ಬಿಜೆಪಿ ಸಂವಿಧಾನವನ್ನು ಧಿಕ್ಕರಿಸುತ್ತಿದೆ. ಭಾರತ ಸ್ವಾತಂತ್ರ್ಯಗೊಳ್ಳಲು ಕೊಡುಗೆ ನೀಡಿದವರನ್ನು ಮರೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರ ಕೊಡುಗೆ ಇಲ್ಲ. ಆದರೆ ಇವತ್ತು ಸಂಕುಚಿತ ರಾಷ್ಟ್ರೀಯತೆಯ ಹೆಸರಲ್ಲಿ ರಾಷ್ಟ್ರವನ್ನು ಒಡೆಯುತ್ತಿದ್ದಾರೆ ಎಂದರು.
ಇದೇ ವೇಳೆ ಅಗ್ನಿಪಥ ಯೋಜನೆ ಬಗ್ಗೆ ಮಾತನಾಡಿದ ಕಾರಟ್, ಯುವಕರ ಭವಿಷ್ಯದ ಜೊತೆಗೆ, ರಾಷ್ಟ್ರದ ಭದ್ರತೆ ಜೊತೆಗೆ ಮತ್ತು ಸೇನಾ ರಚನೆಯ ಜೊತೆಗೆ ಕೇಂದ್ರ ಸರ್ಕಾರ ಆಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ವರ್ಷವಿಡೀ 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಆಚರಿಸಲಾಗುತ್ತಿದೆ.