ಕೊಚ್ಚಿ: ಕೊಚ್ಚಿಯಲ್ಲಿ ಕಸದ ರಾಶಿಯ ಮೇಲೆ ಬಿದ್ದಿರುವ ರಾಷ್ಟ್ರಧ್ವಜಕ್ಕೆ ಪೋಲೀಸ್ ಅಧಿಕಾರಿಯೋರ್ವ ನಮಸ್ಕರಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಸದಲ್ಲಿ ಬಿದ್ದಿದ್ದ ರಾಷ್ಟ್ರಧ್ವಜವನ್ನು ನಾಗರಿಕ ಪೋಲೀಸ್ ಅಧಿಕಾರಿ ಟಿ.ಕೆ.ಅಮಲ್ ಗೌರವಪೂರ್ವಕವಾಗಿ ಮಡಚಿರುವುದು ಚಿತ್ರದಲ್ಲಿದೆ ಈ ಚಿತ್ರಗಳು ವೈರಲ್ ಆಗುತ್ತಿದ್ದಂತೆ, ಅವರು ಮೆಚ್ಚುಗೆಯ ಮಹಾಪೂರವನ್ನು ಪಡೆದರು. ಇಂದು ಬೆಳಗ್ಗೆ ಡಿಸಿಪಿ ಅವರನ್ನು ವಿಶೇಷವಾಗಿ ಸನ್ಮಾನಿಸಿದರು. ಮೇಜರ್ ರವಿ ಸೇರಿದಂತೆ ಹಲವರು ಖುದ್ದು ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಿನ್ನೆ ಬೆಳಗ್ಗೆ ಸ್ಥಳೀಯರಿಗೆ ರಾಷ್ಟ್ರಧ್ವಜ ಎಸೆದಿರುವುದು ಕಂಡು ಬಂದಿತ್ತು. ಸ್ಮಶಾನದ ಬಳಿ ಟಿಪ್ಪರ್‍ನಲ್ಲಿ ತಂದು ಸುರಿಯುತ್ತಿದ್ದ ಕಸದಲ್ಲಿ ಕಂಡು ಬಂದ ರಾಷ್ಟ್ರ ಧ್ವಜವನ್ನು ಸ್ಥಳೀಯರು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರು ನಂತರ ಈ ಮಾಹಿತಿಯನ್ನು ಪೋಲೀಸರಿಗೆ ತಿಳಿಸಲಾಯಿತು. ಕಸದ ನಡುವೆ ರಾಷ್ಟ್ರಧ್ವಜಗಳ ಜತೆಗೆ ಕೋಸ್ಟ್ ಗಾರ್ಡ್ ಧ್ವಜಗಳೂ ಸೇರಿದ್ದವು. ಇದು ಕೋಸ್ಟ್ ಗಾರ್ಡ್ ಲೈಫ್ ಜಾಕೆಟ್ ಅನ್ನು ಸಹ ಹೊಂದಿತ್ತು.
ಮಾಹಿತಿ ತಿಳಿದ ಹಿಲ್ಪಾಳ ಪೆÇಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಜೀಪಿನಿಂದ ಕೆಳಗಿಳಿದ ಟಿ.ಕೆ.ಅಮಲ್ ಎಂಬ ಸಿವಿಲ್ ಪೋಲೀಸ್ ಅಧಿಕಾರಿ ರಾಷ್ಟ್ರಧ್ವಜವನ್ನು ನೋಡಿ ನಮಸ್ಕರಿಸಿದ್ದರು. ನಂತರ ಅವರು ಧ್ವಜಗಳನ್ನು ಒಂದೊಂದಾಗಿ ಮಡಚಿದರು. ನಾವ್ಯಾರಾದರೂ ವಿಲೇವಾರಿ ಮಾಡುವೆವು ಎಂದು ಅಲ್ಲಿ ನಿಂತಿದ್ದ ಸ್ಥಳೀಯರು ಹೇಳಿದರೂ ಪೋಲೀಸರು ಒಪ್ಪಲಿಲ್ಲ. ಧ್ವಜಗಳನ್ನು ಕಸದಲ್ಲಿ ಎಸೆದಿರುವುದು ಸರಿಯಲ್ಲ ಎಂದ ಅವರು ಧ್ವಜವನ್ನು ನೀಟಾಗಿ ಮಡಚಿ ತಮ್ಮ ವಶ ಇರಿಸಿಕೊಮಡರು. ಹಿಲ್ ಪ್ಯಾಲೇಸ್ ಪೋಲೀಸರು ರಾಷ್ಟ್ರಧ್ವಜ ಅಪವಿತ್ರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಸ ತೆಗೆಯುವ ಹೊಣೆ ಹೊತ್ತವರೇ ಈ ಕೃತ್ಯ ಎಸಗಿರಬಹುದು ಎಂದು ತೀರ್ಮಾನಿಸಲಾಗಿದೆ.