ನವದೆಹಲಿ : ಕಳೆದ ಎರಡು ವರ್ಷಗಳಿಂದ ಭಾರತದ ಜೊತೆಗಿನ ಗಡಿಬಿಕ್ಕಟ್ಟು ಉಲ್ಬಣಿಸಿರುವ ನಡುವೆಯೇ ಚೀನಾವು ವಿವಾದಿತ ಅಕ್ಸಾಯಿ ಚಿನ್ ಹಾಗೂ ಸಂಘರ್ಷಾವಸ್ಥೆ ತಲೆದೋರಿದ್ದ ಪೂರ್ವ ಲಡಾಕ್ ಮೂಲಕ ಹಾದುಹೋಗುವ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪ ಹೊಸ ಹೆದ್ದಾರಿಯೊಂದನ್ನು ನಿರ್ಮಿಸುತ್ತಿದೆ.
ಚೀನಾದ ಈ ನಡೆಯು ಭಾರತೀಯ ರಕ್ಷಣಾ ಹಾಗೂ ಭದ್ರತಾ ಇಲಾಖೆಗಳ ಗಮನಕ್ಕೆ ಬಂದಿದ್ದು, ಅವು ಈ ಬೆಳವಣಿಗೆಯನ್ನು ತದೇಕಚಿತ್ತದಿಂದ ಗಮನಿಸುತ್ತಿವೆ.
ಚೀನಾದ ಈ ಯೋಜಿತ ಹೆದ್ದಾರಿಯು ಚೀನಾದ ಕ್ಸಿಯಾನ್‌ಜಿಂಗ್ ಪ್ರದೇಶವನ್ನು ಟಿಬೆಟ್
ಜೊತೆಸಂಪರ್ಕಿಸುತ್ತದೆ. ರಸ್ತೆ ಸಂಪರ್ಕವು ಈ ಪ್ರದೇಶದಲ್ಲಿ ಚೀನಾದ ಆಯಕಟ್ಟಿನ
ಸಂಪರ್ಕಶೀಲತೆಯನ್ನು ಹೆಚ್ಚಿಸಲಿರುವುದು ಭಾರತದ ಕಳವಳವಕ್ಕೆ ಕಾರಣವಾಗಿದೆ ಎಂದು ಸೌತ್
ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಜಿ695 ರಾಷ್ಚ್ರೀಯ
ಹೆದ್ದಾರಿಯೆಂಬುದಾಗಿ ಪ್ರಸ್ತಾವಿಸಲಾದ ಈ ಹೆದ್ದಾರಿಯು, ಇತ್ತೀಚೆಗೆ ಅನಾವರಣಗೊಳಿಸಲಾದ
ಚೀನಾದ ರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿದೆ. ಈ ಯೋಜನೆ ಯು 2035ರೊಳಗೆ ಒಟ್ಟು 4.61
ಲಕ್ಷ ಕಿ.ಮೀ. ಹೆದ್ದಾರಿ ಹಾಗ ಮೋಟಾರ್‌ವೇಯ ನಿರ್ಮಾಣ ಒಳಗೊಂಡಂತೆ ಒಟ್ಟು 345 ನೂತನ
ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ಈ ಹೆದ್ದಾರಿಯ ನಿರ್ಮಾಣದಿಂದಾಗಿ ಅಗತ್ಯ ಬಿದ್ದಾಗಲೆಲ್ಲಾ ಚೀನಾವ ತನ್ನ ಸೇನೆಯನ್ನು ಜಮಾವಣೆಗೊಳಿಸಲು ಹಾಗೂ ಎಲ್‌ಎಸಿಯಲ್ಲಿರುವ ತನ್ನ ಮುಂಚೂಣಿ ಸ್ಥಲಗಳಿಗೆ ಸೇನಾಪಡೆಗಳನ್ನು ತ್ವರಿತವಾಗಿ ಕಳುಹಿಸುವುದಕ್ಕೆ ಇನ್ನೊಂದು ಪ್ರವೇಶಕೇಂದ್ರವಾಗಲಿದೆ. ಅಲ್ಲದೆ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಿಯೋಜಿತವಾಗಿರುವ ತನ್ನ ಸೇನಾಪಡೆಗಳ ಸುಗಮ ನಿರ್ವಹಣೆಯನ್ನು ಖಾತರಿಪಡಿಸುತ್ತದೆ.
ವಾಸ್ತವ ಗಡಿನಿಯಂತ್ರಣ ರೇಖೆ ಸಮೀಪದ ವಿವಾದಿತ
ಪ್ರದೇಶದಲ್ಲಿ ಚೀನಾವು ಹೆದ್ದಾರಿಯನ್ನು ನಿರ್ಮಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ
ಭಾರತದ ರಕ್ಷಣಾ ಹಾಗೂ ಭದ್ರತಾ ಸಂಸ್ಥಾಪನೆಗಳು, ತಾವು ಈ ಬೆಳವಣಿಗೆಗಳನ್ನು
ಗಮನಿಸುತ್ತಿರುವುದಾಗಿ ಹೇಳಿವೆ.
ಆದಾಗ್ಯೂ ಭಾರತ ಕೂಡಾ ತನ್ನ ಗಡಿಪ್ರದೇಶದಲ್ಲಿ ಹೊಸ
ರಸ್ತೆಗಳು ಹಾಗೂ ಸುರಂಗಮಾರ್ಗಗಳ ನಿರ್ಮಾಣ ಸೇರಿದಂತೆ ಗಡಿಮೂಲಸೌಕರ್ಯವನ್ನು
ತ್ವರಿತಗೊಳಿಸುತ್ತದೆ. ಇದರಿಂದಾಗಿ ಗಡಿಗ್ರಾಮಗಳಲ್ಲಿ ವಾಸವಾಗಿರುವ ಜನರ ಜೀವನ ಕೂಡಾ
ಸುಗಮಗೊಳ್ಳಲಿದೆ ಹಾಗೂ ಸೇನಾ ಸಿಬ್ಬಂದಿಯ ತ್ವರಿತ ಸಾಗಾಟ ಸುಲಭವಾಗಲಿದೆಯೆಂದು ಅವು
ಹೇಳಿವೆ.
ಜಿ695 ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಾ ನಿರ್ಮಿಸುತ್ತಿರುವ ಎರಡನೆ ಅತಿ ದೊಡ್ಡ ಹೆದ್ದಾರಿ ಯೋಜನೆಯಾಗಿದೆ. 1955ರಲ್ಲಿ ಚೀನಾವು ಜಿ219 ಯೋಜನೆಯನ್ನು ಪೂರ್ಣಗೊಳಿಸಿತ್ತು.
ಚೀನಾದ ನೂತನ ಜಿ695 ಹೆದ್ದಾರಿ ಯೋಜನೆಯು, ಹಾಟ್‌ಸ್ಪ್ರಿಂಗ್ಸ್, ಡೆಪ್ಸಾಂಗ್ ಪ್ರಸ್ಥಭೂಮಿ ಹಾಗೂ ಗಲ್ವಾನ್ ಕಣಿವೆ ಸೇರಿದಂತೆ ಕಳೆದ 24 ತಿಂಗಳುಗಳಿಗೂ ಅಧಿಕ ಸಮಯ ಭಾರತ -ಚೀನಾ ಗಡಿಯಲ್ಲಿ ಸಂಘರ್ಷಾವಸ್ಥೆ ತಲೆದೋರಿದ್ಧ ಸ್ಥಳಗಳಿಗೆ ತನ್ನ ಸೇನಾ ಪಡೆಗಳನ್ನು ತ್ವರಿತವಾಗಿ ಕಳುಹಿಸಲು ಸಾಧ್ಯವಾಗಲಿದೆ. ಗಲ್ವಾನ್ ಕಣಿವೆಯಲ್ಲಿ 2020ರಲ್ಲಿ ಭಾರತ ಹಾಗೂ ಚೀನಾದ ಸೇನಾಪಡೆಗಳ ನಡುವೆ ನಡುವೆ ನಡೆದ ಘರ್ಷಮೆಯಲ್ಲಿ ಎರಡೂ ಕಡೆಗಳಲ್ಲಿನ ಯೋಧರು ಸಾವನ್ನಪ್ಪಿದ್ದರು ಕಳೆದ ರವಿವಾರ ಎಲ್‌ಎಸಿ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪರಿಹಾರಸೂತ್ರವನ್ನು ಕಂಡುಹಿಡಿಯಲು ಭಾರತ ಹಾಗೂ ಚೀನಾವು ನಡೆಸಿದ 16ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಯಾವುದೇ ತಕ್ಷಣದ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ.