ತಿರುವನಂತಪುರ: ಅಸಂವಿಧಾನಿಕ ಹೇಳಿಕೆಗಳ ಹಿನ್ನೆಲೆಯಲ್ಲಿ ಸಂಸ್ಕøತಿ ಮತ್ತು ಮೀನುಗಾರಿಕೆ ಇಲಾಖೆ ಸಚಿವ ಸಾಜಿ ಚೆರಿಯನ್ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿಯನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿರುವÀರು. ಪಕ್ಷದ ನಾಯಕತ್ವದ ಸೂಚನೆ ಮೇರೆಗೆ ರಾಜೀನಾಮೆ ನೀಡಲಾಗಿದೆ.
ಮಧ್ಯಾಹ್ನದ ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರವನ್ನು ನೀಡಿದರು. ಸಭೆಯಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ರಾಜೀನಾಮೆಗೆ ನಿರ್ದೇಶಿಸಿದರು ಎಂದು ವರದಿಯಾಗಿದೆ. ಅಸಂವಿಧಾನಿಕ ಹೇಳಿಕೆಯಿಂದಾಗಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಇದರೊಂದಿಗೆ ಸಚಿವರ ರಾಜೀನಾಮೆಗೆ ಒತ್ತಡ ಬಲವಾಯಿತು.