ಕೊಚ್ಚಿ: ಪ್ರೇಮ ಸಂಬಂಧದಲ್ಲಿ ಲಿವಿಂಗ್ ಟುಗೆದರ್ ನಂತರ ಸಮಸ್ಯೆಗಳು ಎದುರಾದಾಗ ಎತ್ತುವ ಆರೋಪಗಳನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.ಈಗಿನ ಪೀಳಿಗೆಯ ದೃಷ್ಟಿಕೋನವೇ ಭಿನ್ನವಾಗಿದೆ. ಪುರುಷರು ಮತ್ತು ಮಹಿಳೆಯರು ಮದುವೆಯಾಗದೆ ಒಟ್ಟಿಗೆ ವಾಸಿಸುವ ಸಮಯ ಇದೀಗ ಹೊಸತಿದೆ. ಪ್ರೇಮ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಉಂಟಾದಾಗ ಒಬ್ಬರ ಆರೋಪಗಳು ಮತ್ತೊಬ್ಬರಿಗೆ ತೊಂದರೆಯನ್ನುಂಟು ಮಾಡುತ್ತವೆ ಎಂದೂ ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಈ ಬಗ್ಗೆ ಮಾತನಾಡಿರುವರು.
ನವನೀತ್ ಎನ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್‍ನ ಏಕ ಪೀಠವು ಪರಿಗಣಿಸುತ್ತಿರುವಾಗ ಹೈಕೋರ್ಟ್‍ನ ಈ ಅವಲೋಕನ ನಡೆಸಿದೆ.
ಒಬ್ಬ ವ್ಯಕ್ತಿಯು ಸಂಬಂಧವನ್ನು ಮುಂದುವರಿಸಲು ಬಯಸಿದಾಗ ಮತ್ತು ಇನ್ನೊಬ್ಬರು ಅದನ್ನು ಕೊನೆಗೊಳಿಸಲು ಬಯಸಿದರೆ, ಅದು ಆರೋಪ ಮತ್ತು ಮೊಕದ್ದಮೆಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯವು ಮೌಖಿಕವಾಗಿ ಸೂಚಿಸಿತು. ಇಂತಹ ಆರೋಪಗಳು ಬಂದಾಗ ಅದನ್ನು ಕೇವಲ ಭರವಸೆಯ ಉಲ್ಲಂಘನೆಯಾಗಿ ನೋಡಬೇಕೇ ಹೊರತು ಅತ್ಯಾಚಾರವೆಂಬಂತೆ ನೋಡಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.